Breaking News

ನಾಳೆ ಬೆಳಿಗ್ಗೆ ಮೆರವಣಿಗೆಯ ಬಳಿಕ ಕಳಗಿ ಅಂತ್ಯಕ್ರಿಯೆ

Advt_Headding_Middle
Advt_Headding_Middle


ಅಪಘಾತದಲ್ಲಿ ಮೃತರಾಗಿರುವ ಬಿಜೆಪಿ ಧುರೀಣ ಕಳಗಿ ಬಾಲಚಂದ್ರ ಅವರ ಪಾರ್ಥಿವ ಶರೀರದ ಮರಣೋತ್ತರ ಶವ ಪರೀಕ್ಷೆಯು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ನಡೆದಿದ್ದು, ಶಾಸಕ ಕೆಜಿ ಬೋಪಯ್ಯ,ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಯ ಹತ್ತಾರು ನಾಯಕರು ನೂರಾರು ಕಾರ್ಯಕರ್ತರು ಆಸ್ಪತ್ರೆ ಹೊರಗೆ ಜಮಾಯಿಸಿದ್ದಾರೆ.


ಅವರ ಮೃತದೇಹವನ್ನು ಇಂದು ರಾತ್ರಿಯೇ ಸಂಪಾಜೆಯ ಮನೆಗೆ ತರಲಿದ್ದು ನಾಳೆ ಬೆಳಿಗ್ಗೆ ವಿಧಿವಿಧಾನಗಳನ್ನು ನಡೆಸಿದ ಬಳಿಕ ಬೆ. 10 ಗಂ.ಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ ಎಂದು ತಿಳಿದುಬಂದಿದೆ.

 


ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮನೆಯಲ್ಲಿ ನೆರವೇರಿಸಿದ ಬಳಿಕ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗುವುದು.

ಸಂಪಾಜೆಯ ಮನೆಯಿಂದ ಹೊರಟು ಕೊಯಿನಾಡು ವರೆಗೆ ಸಾಗಿ ಅಲ್ಲಿಂದ ತಿರುಗಿ ಸಂಪಾಜೆ ಗೇಟ್ ನವರೆಗೆ ಬಂದು ಬಳಿಕ ಬೆ. 11ಗಂಟೆಗೆ ಅವರ ಮನೆಯ ಹಿಂಬದಿಯಲ್ಲಿರುವ ಸ್ಥಳದಲ್ಲಿ ದಹನಕ್ರಿಯೆ ನಡೆಸಲಾಗುವುದೆಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.