ಸುಳ್ಯದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನ ಮತ್ತು ವಿಶ್ವ ಗುಬ್ಬಚ್ಚಿ ದಿನಾಚರಣೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ಅರಣ್ಯ ಉಪವಿಭಾಗದ ವತಿಯಿಂದ ಸುಳ್ಯದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ ಮತ್ತು ವಿಶ್ವ ಗುಬ್ಬಚ್ಚಿ ದಿನಾಚರಣೆಯು ಮಾ.೨೧ರಂದು ಸುಳ್ಯದ ಕೇಂದ್ರೀಯ ನಾಟಾ ಸಂಗ್ರಹಾಲಯದಲ್ಲಿ ನಡೆಯಿತು. ಸುಳ್ಯದ ಎ.ಸಿ.ಎಫ್. ಆಸ್ಟಿನ್ ಪಿ ಸೋನ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಪರಿಸರ ರಕ್ಷಣೆ ಹಾಗೂ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಲು ಆಧುನಿಕ ತಂತ್ರಜ್ಞಾನಗಳು ಯಾವ ರೀತಿಯಲ್ಲಿ ಕಾರಣವಾಗುತ್ತಿದೆ ಎಂಬುದರ ಕುರಿತು ವಿವರ ನೀಡಿದರು.
ಕುಶಾಲನಗರ ಅರಣ್ಯ ಇಲಾಖೆಯ ತರಬೇತಿ ಕೇಂದ್ರದ ಎ.ಸಿ.ಎಫ್. ಶಿವಪ್ಪ ಹಾಗೂ ಋಏಂಜರ್ ರಾಘವೇಂದ್ರರು ಮುಖ್ಯ ಅತಿಥಿಗಳಾಗಿದ್ದರು. ಪಂಜ ರೇಂಜರ್ ಗಿರೀಶ್ ಉಪಸ್ಥಿತರಿದ್ದರು. ಸುಳ್ಯ ರೇಂಜರ್ ಮಂಜುನಾಥ್ ಸ್ವಾಗತಿಸಿ, ಸುಬ್ರಹ್ಮಣ್ಯ ರೇಂಜರ್ ತ್ಯಾಗರಾಜ್ ವಂದಿಸಿದರು. ಫಾರೆ ಸ್ಟರ್ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.