Breaking News

ಕೊ.ಸಂ.ಪ.ಕೃ.ಪ.ಸ.ಸಂ. ಬಾಲಚಂದ್ರ ಕಳಗಿಯವರಿಗೆ ಶ್ರದ್ಧಾಂಜಲಿ ಸಮರ್ಪಣೆ

Advt_Headding_Middle
Advt_Headding_Middle

ಕೊಡಗು ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿಯವರು ಮಾ.19ರಂದು ನಡೆದ ಅಪಘಾತದಲ್ಲಿ ಮೃತಪಟ್ಟ ಪ್ರಯುಕ್ತ ಸಂಘದ ಕಛೇರಿಯಲ್ಲಿ ಬಾಲಚಂದ್ರ ಕಳಗಿಯವರಿಗೆ ಶ್ರದ್ಧಾಂಜಲಿ ಸಮರ್ಪಣಾ ಸಭೆಯು ಮಾ.21ರಂದು ಜರುಗಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ ಹಾಗೂ ಸಂಘದ ನಿರ್ದೇಶಕ ಅನಂತ ಎನ್.ಸಿ. ಅವರು ಬಾಲಚಂದ್ರ ಕಳಗಿಯವರು ಸಂಘಕ್ಕೆ ಸಲ್ಲಿಸಿದ ಪ್ರಾಮಾಣಿಕ ಸೇವೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಪನೇಡ್ಕ, ನಿರ್ದೇಶಕರುಗಳಾದ ಆದಂಕುಂಞಿ ಸಂಟ್ಯಾರ್, ತೀರ್ಥಪ್ರಸಾದ್ ಕೋಲ್ಚಾರು, ರಮಾನಂದ ಬಿ.ಟಿ., ಪಕ್ಕೀರ ಎಚ್, ಮನೋರಮ ಬಿ.ಎಸ್, ಶ್ರೀಕಾಂತ್ ಕೆ.ಜಿ, ದಿನೇಶ್ ಸಣ್ಣಮನೆ, ರೇವತಿ ಕಾಸ್ಪಾಡಿ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.