Breaking News

ತಹಶೀಲ್ದಾರ್ ಮತ್ತು ನ.ಪಂ. ಸಿಬ್ಬಂದಿಗಳಿಂದ ಸ್ವಚ್ಛತಾ ಜಾಗೃತಿ ಅಭಿಯಾನ

Advt_Headding_Middle
Advt_Headding_Middle

ಸುಳ್ಯ ನ.ಪಂ. ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಸುಳ್ಯ ತಹಶೀಲ್ದಾರ್ ಕುಂಞಿ ಅಹ್ಮದ್‌ರವರು ನ.ಪಂ. ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಜೊತೆಗೆ ಇಂದು ಬೆಳಿಗ್ಗೆ ಅಂಬಟೆಡ್ಕ ವಾರ್ಡ್‌ನಲ್ಲಿ ಸಂಚರಿಸಿ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಿದರು.

 

ಮನೆ ಮನೆಗೆ ತೆರಳಿದ ತಂಡ ಕಸವನ್ನು ಸಾರ್ವಜನಿಕ ಜಾಗದಲ್ಲಿ ಹಾಕದೆ ಮನೆಯಲ್ಲೇ ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ತೆಗೆದಿರಿಸಿ 2 ದಿನಕ್ಕೊಮ್ಮೆ ಬರುವ ನಗರ ಪಂಚಾಯತ್‌ನ ಕಸ ಸಂಗ್ರಹಣಾ ವಾಹನಕ್ಕೇ ಹಾಕುಂತೆ ವಿನಂತಿಸಿದರು.

ಅಂಬಟೆಡ್ಕದಲ್ಲಿ ಸಾರ್ವಜನಿಕ ಜಾಗದಲ್ಲಿ ಕಸ ಎಸೆದು ಹೋಗುವಂತವರನ್ನು ಹಿಡಿಯಲು ಸಹಕರಿಸುವಂತೆಯೂ ಅವರು ಮನವಿ ಮಾಡಿದರು. ಬೆಳಿಗ್ಗೆ ೭ ಗಂಟೆಗೆ ಆರಂಭವಾದ ಅಭಿಯಾನ ೮-೪೫ರವರೆಗೆ ಮುಂದುವರಿಯಿತು.

” ಸುಳ್ಯ ನಗರದ ಎಲ್ಲಾ ವಾರ್ಡ್‌ಗಳಲ್ಲೂ ಈ ಅಭಿಯಾನವನ್ನು ನ.ಪಂ. ಸಿಬ್ಬಂದಿ ನಡೆಸುವರು. ಜನರು ಕಸವನ್ನು ಸಾರ್ವಜನಿಕ ಸ್ಥಳಕ್ಕೆ ಎಸೆಯದೆ ಹಸಿ ಕಸ ಒಣ ಕಸ ವಿಂಗಡಿಸಿಯೇ ತೆಗೆದಿರಿ ನ.ಪಂ.ಗೆ ನೀಡಿ ಸುಳ್ಯವನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸಲು ಸಹಕರಿಸಬೇಕೆಂದು ವಿನಂತಿಸುತ್ತೇನೆ” ಎಂದು ನ.ಪಂ. ಆಡಳಿತಾಧಿಕಾರಿ ತಹಶೀಲ್ದಾರ್ ಕುಂಞಿ ಅಹ್ಮದ್ ಸುದ್ದಿಯೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.