Breaking News

ಪರಿವಾರ ಕುಟುಂಬದ ದೈವಸ್ಥಾನದಲ್ಲಿ ಶ್ರೀ ದೈವಗಳ ನಡಾವಳಿ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಉಳಿಯ ಪರಿವಾರ ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ,ಶ್ರೀ ಧರ್ಮದೈವದ ಹಾಗೂ ಉಪದೈವಗಳ ನಡಾವಳಿಯು ಮಾ.19 ಮತ್ತು 20 ರಂದು ಜರಗಿತು.

ಮಾ.19 ರಂದು ಪೂ. ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ಸಂಜೆ ಅರಂಬೂರು ತರವಾಡು ದೈವಸ್ಥಾನದಿಂದ ಶ್ರೀ ದೈವಗಳ ಭಂಡಾರ ಆಗಮಿಸಿ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ನಂತರ ಶ್ರೀ ದೈವದ ಕುಳ್ಚಾಟವಾಗಿ ಬಳಿಕ ಗುರುಕಾರ್ನೋರುವಿಗೆ ಬಡಿಸಿ ಸತ್ಯದೇವತೆ, ಪಿಲಿಭೂತ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವದ ನೇಮ ನಡೆದು ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ, ರುದ್ರಚಾಮುಂಡಿ, ಪಾಷಾಣಮೂರ್ತಿ ದೈವಗಳ ನಡಾವಳಿಯು ನಡೆಯಿತು.

ಸದ್ರಿ ದಿನಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕುಟುಂಬದ ಹಿರಿಯರಾದ ಪರಿವಾರ ಕೇಪಣ್ಣ ಗೌಡ, ಲಕ್ಷ್ಮಣ ಗೌಡ ಹಾಗೂ ಕುಟುಂಬಸ್ಥರು ಸರ್ವರನ್ನು ಸ್ವಾಗತಿಸಿದರು. ಗ್ರಾಮದ ಮತ್ತು ಪರ ಊರಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.