ಮಾ.24 ವಳಲಂಬೆಯಲ್ಲಿ 25ನೇ ವರ್ಷದ ಸತ್ಯನಾರಾಯಣ ಪೂಜೆ- ಮಾ.25: ರಾಜ್ಯದೈವ, ಪುರುಷ ದೈವಗಳ ನೇಮೋತ್ಸವ

Advt_Headding_Middle
Advt_Headding_Middle

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಮಾ.24 ರಂದು ಗಣಪತಿ ಹೋಮ, ಮತ್ತು ಶತರುದ್ರಾಭಿಷೇಕ ಹಾಗೂ 25 ನೇ ವರ್ಷದ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದ್ದು ರಾತ್ರಿ ಶ್ರೀ ದುರ್ಗಾಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ. ಹಗಲು ಕಥಾಪ್ರವಚನ, ಭಜನಾ ಕಾರ್ಯಕ್ರಮ ಜರಗಲಿದ್ದು ರಾತ್ರಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇಲ್ಲಿಯ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ಗಿರಿಜಾ ಕಲ್ಯಾಣ ಎಂಬ ಯಕ್ಷಗಾನ ನಡೆದು ಬಳಿಕ ಹಟ್ಟಿಯಂಗಡಿ ಮೇಳ ಮತ್ತು ಸಾಲಿಗದ್ದೆ ಮೇಳದ ಕೂಡುವಿಕೆಯಿಂದ ಮಂತ್ರಮಯೂರಿ ಯಕ್ಷಗಾನ ನಡೆಯಲಿದೆ. ಬೆ. ಗಂ. 10.30 ಕ್ಕೆ ಕಂದ್ರಪ್ಪಾಡಿ ಮತ್ತು ತಳೂರಿನಿಂದ ದೈವಗಳ ಭಂಡಾರ ಬಂದು ಮಾ.25ರ ಬೆಳಗ್ಗೆ ರಾಜ್ಯದೈವದ ಮತ್ತು ಪುರುಷ ದೈವದ ನೇಮೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಸಮಿತಿಯವರು ಕೇಳಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.