ಜೇಸಿ ರವಿ ಕಕ್ಕೆಪದವುರವರಿಗೆ ಸನ್ಮಾನ

Advt_Headding_Middle
Advt_Headding_Middle

ಜೇಸಿಐ ಪಡುಬಿದ್ರಿಯ ಆಶ್ರಯದಲ್ಲಿ ನಡೆದ ಕಡಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ೨೦೧೭ರಲ್ಲಿ ವಲಯ ಉಪಾಧ್ಯಕ್ಷರಾಗಿ ಅತ್ಯುತ್ತಮ ಸಾಧನೆಗೈದ, ಜೇಸಿಐ ಇಂಡಿಯಾ ಫೌಂಡೇಶನ್ ಗೆ ವಲಯ ಉಪಾಧ್ಯಕ್ಷರಾಗಿ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಸಹಕರಿಸಿದ ಮತ್ತು ವಲಯದಲ್ಲಿ ಶ್ರೇಷ್ಠ ಕಾರ್ಯಗಳನ್ನು ನೆರವೇರಿಸಿದ ಪ್ರಸ್ತುತ ವಲಯಾಧಿಕಾರಿಯಾಗಿ, ನಿರ್ದೇಶಕರಾಗಿರುವ ಜೇಸಿಐ ಸೆನೆಟರ್ ರವಿ ಕಕ್ಕೆಪದವು ಅವರನ್ನು ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಅನೀಶ್ ಮ್ಯಾಥ್ಯೂ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಂ.ಆರ್.ಜಿ ಗ್ರೂಪ್ ನ ಮ್ಯಾನೆಜಿಂಗ್ ಡೈರೆಕ್ಟರ್ ಪ್ರಕಾಶ್ ಶೆಟ್ಟಿ, ಜೇಸಿಐ ಇಂಡಿಯಾ ಫೌಂಡೇಶನ್ ನ ನಿರ್ದೇಶಕ ವೈ. ಸುಕುಮಾರಣ್, ವಲಯಾಧ್ಯಕ್ಷ ಅಶೋಕ್ ಚೂಂತಾರ್, ನಿಕಟಪೂರ್ವ ವಲಯಾಧ್ಯಕ್ಷ ಹಾಗೂ ರಾಷ್ಟ್ರೀಯ ಸಂಯೋಜಕ ರಾಕೇಶ್ ಕುಂಜೂರ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸದಾನಂದ ನಾವಡ, ಮುರಳೀಶ್ಯಾಮ್, ಅನಿಲ್ ಕುಮಾರ್, ಜೇಸಿಐ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.