Breaking News

ಬೆಳ್ಳಾರೆ ದರ್ಸ್ ವಾರ್ಷಿಕೋತ್ಸವ ಸಮಾರೋಪ

Advt_Headding_Middle
Advt_Headding_Middle

 

ಬಾಂಗ್ ಸತ್ಯ ವಿಶ್ವಾಸಿಗಳ ಮಾರ್ಗ ದೀಪವಾಗಿದೆ: ಸಿಂಸಾರುಲ್ ಹಖ್

ಅಲ್ ಮಿನ್ ಹಾಜ್ ಸ್ಟೂಡೆಂಟ್ ಅಸೋಸಿಯೇಶನ್ ,ರಹ್ಮಾನಿಯಾ ದರ್ಸ್ ವಿದ್ಯಾರ್ಥಿ ಸಮಾಜದ ದರ್ಸ್ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಮಾ.22 ರಂದು ನಡೆಯಿತು.

ಸಯ್ಯದ್ ಕೆ ಎಸ್ ಅಲೀ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಿ ,ದುವಾರ್ಶೀವಚನ ಗೈದರು .

ದಿನನಿತ್ಯ ಐದುಸಲ ಮಸೀದಿ ಗಳಲ್ಲಿ ಮೊಳಗುವ ಬಾಂಗ್ ಸತ್ಯ ವಿಶ್ವಾಸಿಗಳ ಮಾರ್ಗದೀಪವಾಗಿದ್ದು ,ಅದು ಅಲ್ಲಾಹನು ನಿಶ್ಚಯಿಸಿಕೊಟ್ಟ ಪದ ಸಂಚಯವಾಗಿದೆ .ಅದರ ಪದಗಳು ಮತ್ತು ವಾಕ್ಯ ಗಳು ಅತ್ಯದ್ಭುತ ವಾಗಿದ್ದು ಹಲವಾರು ಆಶಯಗಳನ್ನು ಮತ್ತು ಹಲವಾರು ಅರ್ಥ ಗಳನ್ನು ಮತ್ತು ಸಂದೇಶ ಗಳನ್ನು ಒಳಗೊಂಡಿದೆ. ಸತ್ಯ ವಿಶ್ವಾಸಿಗಳ ಬದುಕಿನ ಮಾರ್ಗದೀಪವು ಇದಾಗಿದ್ದು ವಿಶ್ವಾಸಿಗಳನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಮತ್ತು ಅಲ್ಲಾಹನ ಸ್ಮರಣೆಯನ್ನು ವಿಶ್ವಾಸಿ ಮನಸ್ಸುಗಳಲ್ಲಿ ಸೂಕ್ಷಿಸಿಡಲು ಇದು ಉಪಯುಕ್ತ ವಾಗಿದೆ ಎಂದು ಸಿಂಸಾರುಲ್ ಹಖ್ ಹುದವಿ ನುಡಿದರು.

ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ್ದರು.

ನೂರುಲ್ ಹುದಾ ಮಾಡನ್ನೂರು ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಯ್ಯದ್ ರಯೀಸ್ ತಂಙಳ್ ಕುಂಬೋಳ್ ,ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ,ಎಸ್ ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ,ಮಲೇಶ್ಯ ಅಬ್ದುಲ್ ರಝಾಕ್ ಮೌಲಾನ ,ಹಝ್ರತ್ ಅಬ್ದುಲ್ಲಾ ಮುಸ್ಲಿಯಾರ್ ಬೆಂಗಳೂರು , ಸಿರಾಜುದ್ದೀನ್ ಫೈಝಿ ಮಾಡನ್ನೂರು , ಸಮಸ್ತ ವಿದ್ಯಾಭ್ಯಾಸ ಮಂಡಳಿ ಚೇಳಾರಿಯ ಸದಸ್ಯರಾದ ಕೆ ಎಸ್ ಇಸ್ಮಾಯಿಲ್ ಹಾಜಿ ಕಲ್ಲಡ್ಕ , ರಶೀದ್ ಹಾಜಿ ಪರ್ಲಡ್ಕ ,ನೂರುಲ್ ಹುದಾ ಅಕಾಡೆಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ,ಎಲಿಮಲೆ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ , ಶಂಸುದ್ದೀನ್ ಸುಳ್ಯ ,ಕೆ ಎಂ ಮುಸ್ತಫಾ ಸುಳ್ಯ ,ಸುಳ್ಯ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಕಲ್ಲುಗುಂಡಿ , ಕತ್ತರ್ ಇಬ್ರಾಹೀಂ ಹಾಜಿ ಮಂಡೆಕೋಲು ,ವಿಟ್ಲ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಶರೀಫ್ ಮೂಸ ಕುದ್ದುಪದವು , ಅಬ್ದುಲ್ ಹಮೀದ್ ಹಾಜಿ ಸುಳ್ಯ ,ಅಬ್ದುಲ್ ರಝಾಕ್ ಹಾಜಿ ನ್ಯೂ ರಾಜಧಾನಿ ,ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್ ಟಿ ಅಬ್ದುಲ್ ರಝಾಕ್ ಹಾಜಿ , ಹಿದಾಯ ಎಜುಕೇಶನಲ್ ಟ್ರಸ್ಟ್ ಕಾರ್ಯ ದರ್ಶಿ ಶಾಫಿ ಬೆಳ್ಳಾರೆ , ಅನ್ಸಾರುದ್ದೀನ್ ಜಮಾಅತ್ ಕಮಿಟಿ ಕಾರ್ಯ ದರ್ಶಿ ಯಾಕೂಬ್ ಖಾನ್ ,ಜುಮಾ ಮಸೀದಿ ಮಾಡಾವು ಅಧ್ಯಕ್ಷ ಅಬ್ದುಲ್ ಹಮೀದ್ , ಬ್ರದರ್ಸ್ ಅಬ್ದುಲ್ಲಾ ನಿಂತಿಕಲ್ಲು , ಸಿ ಹೆಚ್ ಅಬ್ದುಲ್ ಅಝೀಝ್ ಕಾವು , ಯುವ ಉದ್ಯಮಿ ಫಾರೂಖ್ ಸಂಟ್ಯಾರ್ ,ಅಬೂಬಕ್ಕರ್ ರಿಯಾಝ್ ರಹ್ಮಾನಿ ,ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ , ಹಸನ್ ಅರ್ಶದಿ ಬೆಳ್ಳಾರೆ , ಉಮ್ಮರ್ ಫೈಝಿ ಅಜ್ಜಾವರ , ಅಬ್ದುಲ್ ರಝಾಕ್ ಫೈಝಿ ಕಲ್ಲುಗುಂಡಿ ,ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸೇರಿದಂತೆ ಮೊದಲಾದ ಗಣ್ಯಾತಿ ಗಣ್ಯರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಝಕರಿಯಾ ಜುಮಾ ಮಸೀದಿ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ಸ್ವಾಗತಿಸಿ ,ಹಿದಾಯ ತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.

(ಚಿತ್ರ ವರದಿ :ರಶೀದ್ ಬೆಳ್ಳಾರೆ)

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.