ಮಾ.27  ರಿಂದ ಏ. 2: ಯೇನೆಕಲ್ಲು ಜಾತ್ರೋತ್ಸವ

Advt_Headding_Middle
Advt_Headding_Middle

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ಕೋಟಿನಾಯಕ ದೈವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಮಹೋತ್ಸವ ಮಾ.27 ರಿಂದ ಏ. 2ರ ತನಕ ನಡೆಯಲಿದೆ. ಮಾ. 24ರಂದು ಪೂರ್ವನಿಶ್ಚಿತ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.

ಮಾ. 27ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಗಂಟೆ 6.೦೦ರಿಂದ ಭಜನೆ, ರಂಗಪೂಜೆ, ರಾತ್ರಿ 7.3೦ರಿಂದ ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಾ. ೨೮ರಂದು ಪೂ. ೯.೦೦ರಿಂದ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಮಾ. ೨೯ರಿಂದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ಕೋಟಿನಾಯಕ ದೈವಸ್ಥಾನದಲ್ಲಿ ಸಂಜೆ ೬.೩೦ರಿಂದ ಉಗ್ರಾಣ ತುಂಬಿಸುವುದು, ಮುಹೂರ್ತ ತೋರಣ, ರಾತ್ರಿ ೯.೩೦ರಿಂದ ಉಳ್ಳಾಕುಲು ವಗೈರೆ ದೈವಗಳ ನೇಮ ನಡೆಯಲಿದೆ. ಮಾ. ೩೦ರಂದು ರಾತ್ರಿ ೮.೦೦ರಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮ ನಡೆಯಲಿದೆ. ಮಾ. ೩೧ರಂದು ರಾತ್ರಿ ೭.೦೦ಗಂಟೆಗೆ ಭಂಡಾರ ಬಂದು, ರಾತ್ರಿ ೮.೩೦ರಿಂದ ಉಡ್ಡೋತ್ತಾರು-ಕುಮಾರ ದೈವಗಳ ನೇಮ ನಡೆಯಲಿದೆ. ಏ. ೧ರಂದು ಬೆಳಿಗ್ಗೆ ೬.೦೦ ಗಂಟೆಯಿಂದ ಶ್ರೀ ಬಚ್ಚನಾಯಕ ದೈವದ ನೇಮ, ಬಳಿಕ ಕೋಟಿನಾಯಕ ದೈವದ ನೇಮ, ರಾತ್ರಿ ೮.೦೦ ಗಂಟೆಯಿಂದ ಪ್ರಧಾನಿ ವಗೈರೆ ದೈವದ ನೇಮ ನಡೆದ ಬಳಿಕ ಭಂಡಾರ ಹೊರಡುವುದು. ಏ. ೨ರಂದು ರಾತ್ರಿ ೮.೦೦ ಗಂಟೆಯಿಂದ ಗುಳಿಗ ದೈವದ ನೇಮ ನಡೆಯಲಿದೆ. ಏ. ೨೦ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ೭.೩೦ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.