ಕೊಡಗು ಸಂಪಾಜೆ: ಬಿಜೆಪಿ ವತಿಯಿಂದ ಬಾಲಚಂದ್ರ ಕಳಗಿಯವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿಯವರು ಮಾ.19ರಂದು ಅಪಘಾತದಲ್ಲಿ ಮೃತಪಟ್ಟಿದ್ದು ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಭೆಯು ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಮಾ.24ರಂದು ಜರುಗಿತು.

ವೇದಿಕೆಯಲ್ಲಿ ಕೊಡಗು ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಕುಮಾರ ಚಿದ್ಗಾರ್, ಉಪಾಧ್ಯಕ್ಷ ಸುಂದರ ಚಿಟ್ಟಿಕ್ಕಾನ, ಕೊಯನಾಡು ಗಣಪತಿ ದೇವಾಲಯದ ಅಧ್ಯಕ್ಷ ಕೆ.ಬಿ.ಉಲ್ಲಾಸ, ಸಂಪಾಜೆ ಸ್ಥಾನೀಯ ಸಮಿತಿ ಅಧ್ಯಕ್ಷ ಒ.ಆರ್.ಮಾಯಿಲಪ್ಪ, ರಮಾನಂದ ಬಾಳೆಕಜೆ ಅವರು ಉಪಸ್ಥಿತರಿದ್ದು ಅಗಲಿದ ಧೀಮಂತ ನಾಯಕ ಬಾಲಚಂದ್ರ ಕಳಗಿಯವರಿಗೆ ನುಡಿನಮನ ಸಲ್ಲಿಸಿದರು.  ಬಿಜೆಪಿ ಕಾರ್ಯಕರ್ತರು ಹಾಗೂ ಸಂಪಾಜೆ ಗ್ರಾಮದ ಕೊಯನಾಡು, ಚೆಡಾವು, ಅರೆಕಲ್ಲು, ಚಿಟ್ಟೆಕಾನ, ಗುಡ್ಡೆಗದ್ದೆ, ಕಲ್ಲಾಳ, ಸಂಪಾಜೆ ಬೈಲು, ಚೆಂಬು, ಪೆರಾಜೆ, ಕಲ್ಲುಗುಂಡಿ ಭಾಗದ ಸಮಸ್ತ ಬಂಧು-ಮಿತ್ರರುಗಳು ಅಗಲಿದ ನಾಯಕನ ಶ್ರದ್ಧಾಂಜಲಿ ಸಭೆಗೆ ಭಾಗವಹಿಸಿದರು. ಭಾಗವಹಿಸಿದ ಎಲ್ಲಾ ಗ್ರಾಮಸ್ಥರು, ಬಂಧು ಮಿತ್ರರು, ಅಭಿಮಾನಿ ಬಂಧುಗಳು ಅಗಲಿದ ನಾಯಕನಿಗೆ ಮಾನಾಚಾರಣೆಯ ಮೂಲಕ ಮತ್ತು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಕೊಡಗು ಜಿಲ್ಲಾ ಬಿಜೆಪಿಯ ಸುಮಾರು ಐನೂರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.