Breaking News

ಸ್ಪೋರ್ಟ್ಸ್ ವರ್ಲ್ಡ್ ಕ್ರೀಡಾ ಉಪಕರಣ ಮಾರಟ ಮಳಿಗೆ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಸೂಂತೋಡು ಕಟ್ಟಡದ ಮೊದಲನೆಯ ಮಹಡಿಯಲ್ಲಿ ಪುತ್ತೂರು ಮತ್ತು ಮಡಿಕೇರಿಯಲ್ಲಿ ಮಳಿಗೆಯನ್ನು ಹೊಂದಿರುವ ಅನ್ಸಾಫ್‌ರವರ ಮಾಲಕತ್ವದ ಸ್ಪೋರ್ಟ್ಸ್ ವರ್ಲ್ಡ್ ಕ್ರೀಡಾ ಉಪಕರಣ ಮಾರಟ ಮಳಿಗೆ ಮಾ.೨೫ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆ ಯನ್ನು ಅಂತರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ ಉದ್ಯಮಿ ರಿಜ್ವಾನ್ ಅಹ್ಮದ್ ಜನತಾ ನೆರವೇರಿಸಿದರು. ಸಮಾರಂಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಸುಳ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಎನ್.ಎ ರಾಮಚಂದ್ರ, ಎ.ಪಿ.ಎಂ.ಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಗಾಂಧಿನಗರ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಸುಳ್ಯ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ.ಟಿ ವಿಶ್ವನಾಥ, ತಾಲೂಕು ಕಬಡ್ಡಿ ಅಸೋಸಿಯೇಷನ್ ಕೋಶಾಧಿಕಾರಿ ಆರ್.ಬಿ ಬಶೀರ್, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್, ಪತ್ರಕರ್ತ ಗಿರೀಶ್ ಅಡ್ಪಂಗಾಯ, ಸುಳ್ಯ ತಾಲೂಕು ಕ್ರಿಕೆಟ್ ಅಸೋಸಿಯೇಷನ್ ಉಪಾಧ್ಯಕ್ಷ ಹಂಝ ಕಾತೂನ್, ತರಂಗ ಮೊಬೈಲ್ ಮಾಲಕ ಚಂದ್ರ, ಚಾಕೊಲೇಟ್ ಪ್ಯಾನ್ಸಿ ಮಾಲಕ ಬದ್ರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಮಳಿಗೆಯಲ್ಲಿ ಎಲ್ಲಾ ತರಹದ ಕ್ರೀಡಾ ಟ್ರೋಫಿ ಗಳು, ಕ್ರಿಕೆಟ್ ವಾಲಿಬಾಲ್, ಕಬಡ್ಡಿ, ಪುಟ್ಬಾಲ್ ಹಾಗೂ ಇನ್ನಿತರ ಕ್ರೀಡೆಗಳಿಗೆ ಬೇಕಾದ ಜರ್ಸಿಗಳು ಮಿತದರದಲ್ಲಿ ದೊರೆಯುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.