Breaking News

ಡಿ.ಸಿ.ಸಿ.ಬ್ಯಾಂಕ್ ಅಡ್ಡ ಮತದಾನ ಪ್ರಕರಣ: ಸತ್ಯ ಪ್ರಮಾಣಕ್ಕೆ ಸಿದ್ಧ – ಸಂತೋಷ್ ಕುತ್ತಮೊಟ್ಟೆ – ಅಭ್ಯರ್ಥಿಯ ಆಯ್ಕೆ ವಿವರ ಬಿಚ್ಚಿಟ್ಟ ಬರಹ ವೈರಲ್

Advt_Headding_Middle
Advt_Headding_Middle

ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸುಳ್ಯದ ನಿರ್ದೇಶಕ ಸ್ಥಾನದ ಮತದಾನದಲ್ಲಿ ಅಡ್ಡ ಮತದಾನ ನಡೆದ ಕುರಿತು ಬಿಜೆಪಿಯಲ್ಲಿ ಸಂಚಲನ ಉಂಟಾದ ಹಿನ್ನಲೆಯಲ್ಲಿ ಇದೀಗ ಅರಂತೋಡು -ತೊಡಿಕಾನ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆ ಹೇಳಿಕೆಯ ಪೂರ್ಣ ಪಾಠ ಇಂತಿದೆ—
“ನಾನು ಸಂತೋಷ್ ಕುತ್ತಮೊಟ್ಟೆ ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂ.ನಿ. ಇದರ ಡೆಲಿಗೇಟರ್ ಆಗಿ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ,
ಇಂತಹುದೇ ಪರಿಸ್ಥಿತಿಯಲ್ಲಿ ಅರಂತೋಡಿನ ಸಹಕಾರ ಸಂಘದ ಆಡಳಿತವನ್ನು ನಮ್ಮ ಸಂಘಟನೆ ಪಡಕೊಳ್ಳುವ ಉದ್ದೇಶದಿಂದ ಅಕಸ್ಮಿಕವಾಗಿ ಸಹಕಾರಿ ರಂಗಕ್ಕೆ ಬಂದವನು, ಅಂದಿನ ದಿನಗಳಲ್ಲಿ ನಮ್ಮ ಸಹಕಾರಿ ಸಂಘಕ್ಕೆ ಇದ್ದ ಕಳಂಕವನ್ನು ತೊಡೆದು ಹಾಕಿ ತಾಲೂಕಿನಲ್ಲಿ ಒಂದು ಮಾದರಿ ಸಹಕಾರ ಸಂಘವನ್ನಾಗಿ ಮಾಡುವ ಉದ್ದೇಶದಿಂದ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ.

ಡಿಸಿಸಿ ಬ್ಯಾಂಕಿನ ಚುನಾವಣೆಗೆ ಡೆಲಿಗೇಟರ್ ಆಗಿ ನಮ್ಮ ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಮತ್ತು ಸಂಘದ ಎಲ್ಲಾ ನಿರ್ದೇಶಕರ ಅಭಿಪ್ರಾಯದಂತೆ ನನಗೆ ನೀಡಲಾಯಿತು. ಡಿಸಿಸಿ ಬ್ಯಾಂಕಿನ ನಮ್ಮ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಕಡೆಯಿಂದ ಅಭ್ಯರ್ಥಿಯನ್ನು ಆರಿಸುವರೇ ಸಹಕಾರಿಗಳ ಅಭಿಪ್ರಾಯವನ್ನು ಪಡೆಯಲು ಪರಿವಾರದ ಹಿರಿಯರು ಕರೆದಿದ್ದ ಸಭೆಯ ಸಂದರ್ಭದಲ್ಲಿ “ಈಗಾಗಲೇ ಸಂಘಟನೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದವರಿಗೆ ಅವಕಾಶವನ್ನು ನೀಡದೆ ಅರ್ಹ ಹೊಸಬರಿಗೆ ಅವಕಾಶವನ್ನು ನೀಡುವಂತೆ ಹಿರಿಯರಿಗೆ ವಿನಂತಿಸಿಕೊಂಡಿದ್ದೆ. ಒಂದು ವೇಳೆ ನನಗೆ ಜವಾಬ್ದಾರಿಯನ್ನು ನೀಡಿದರೆ ನಿರ್ವಹಿಸುವುದಾಗಿ ಇಂಗಿತವನ್ನು ವ್ಯಕ್ತಪಡಿಸಿದ್ದೆ. ನಾಮ ಪತ್ರ ಸಲ್ಲಿಸುವ ದಿನಾಂಕ ಆರಂಭವಾಗಿದ್ದರೂ ನಮ್ಮ ಅಭ್ಯರ್ಥಿಯ ಘೋಷಣೆಯಾಗದಿದ್ದಾಗ ಕಳವಳವನ್ನು ಹಿರಿಯರಲ್ಲಿ ವ್ಯಕ್ತಪಡಿಸಿದ್ದೆ. ಮಾರ್ಚ್ ೧೨ರ ಸಂಜೆ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿಯವರು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಂಡೆ. ನಾನು ೧೧, ೧೨, ಮತ್ತು ೧೩ರಂದು ಕುಟುಂಬದ ನಾಗಪ್ರತಿಷ್ಠೆ ಮತ್ತು ಸರ್ಪ ಸಂಸ್ಕಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದು ಈ ಸಂದರ್ಭದಲ್ಲಿ ತಾಲೂಕಿನ ಇತರ ಸಹಕಾರ ಸಂಘಗಳ ಅಧ್ಯಕ್ಷರುಗಳು ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನನ್ನನ್ನು ಕೇಳಿಕೊಂಡಾಗ ನನ್ನ ಗ್ರಾಮದ ಕಾರ್ಯಕರ್ತರನ್ನು, ಸಹಕಾರಿ ಸಂಘದ ನಿರ್ದೇಶಕರನ್ನು ಕೇಳಿಕೊಂಡು ಪರಿವಾರದ ಹಿರಿಯರ ಗಮನಕ್ಕೆ ತಂದೇ ನಾಮ ಪತ್ರ ಸಲ್ಲಿಸಿದ್ದೇನೆ, ಮರುದಿನ ಸಿ.ಎ. ಬ್ಯಾಂಕಿನಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತೇನೆ. ಅಂದಿನ ಸಭೆಯಲ್ಲಿ ಎಲ್ಲಾ ಡೆಲಿಗೆಟರ್ ಗಳು ನಡೆದಂತಹ ಆಯ್ಕೆಪ್ರಕ್ರಿಯೆಯನ್ನು ವಿರೋಧಿಸಿದ್ದರು ಮತ್ತು ಬಹುತೇಕರು ನನ್ನನ್ನು ಬೆಂಬಲಿಸಿದ್ದರು. ಸಭೆಗೆ ಬರದಂತಹ ೬ ಜನ ಡೆಲಿಗೇಟರ್ ಗಳ ಅಭಿಪ್ರಾಯವನ್ನು ಪಡೆದುಕೊಂಡು ಮರುದಿನ ಬೆಳಗ್ಗೆ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಪರಿವಾರದ ಹಿರಿಯರು ಸೂಚಿಸಿದರು.

ಮರುದಿನ ಬೆಳಗ್ಗೆ ವಿಭಾಗ ಕಾರ್ಯವಾಹ ನ. ಸೀತಾರಾಮರವರು ನನಗೆ ದೂರವಾಣಿ ಕರೆ ಮಾಡಿ ನನ್ನ ನಾಮಪತ್ರವನ್ನು ಹಿಂತೆಗೆಯುವಂತೆ ವಿನಂತಿಸಿ, ಒಂದುವೇಳೆ ಮುಂದುವರಿದರೆ ಸಂಘಟನೆ ಮೇಲೆ ಮತ್ತು ಸುಳ್ಯದ ಬಗ್ಗೆ ಆಗುವ ಪರಿಣಾಮವನ್ನು ವಿವರಿಸಿ ಕಳಂಕವನ್ನು ತರದಂತೆ ಸೂಚಿಸಿದರು. ವೈಯುಕ್ತಿವಾಗಿ ಮತ್ತು ಸಂಘಟನೆ ಕಡೆಯಿಂದ ನನ್ನನ್ನು ತಡೆಯಬಹುದಾಗಿದ್ದ ವ್ಯಕ್ತಿ ಅವರಾಗಿದ್ದರು. ಅವರ ಮಾತನ್ನು ಗೌರವಿಸಿ ನನ್ನನ್ನು ಬೆಂಬಲಿಸಿದ ಮತ್ತು ಸೂಚಿಸಿದ ತಾಲೂಕಿನ ಹಿರಿಯ ಅಧ್ಯಕ್ಷರ ಅಭಿಪ್ರಾಯವನ್ನು ಪಡೆದುಕೊಂಡು ನಾನು ನನ್ನ ನಾಮಪತ್ರವನ್ನು ಹಿಂಪಡೆದಿರುತ್ತೇನೆ. ವಿರೋಧ ಪಕ್ಷದಿಂದ ನಾನು ಮುಂದುವರಿದದ್ದೇ ಆದಲ್ಲಿ ನನ್ನನ್ನು ಗೆಲ್ಲಿಸಿಕೊಡುವ ಭರವಸೆಯನ್ನು ನೀಡಿದ್ದರು. ಅದನ್ನು ತಿರಸ್ಕರಿಸಿ ಅಧಿಕಾರಕ್ಕಿಂತ ಸಂಘಟನೆಯ ಹಿತಮುಖ್ಯ ಎಂದು ಒಬ್ಬ ಕಾರ್ಯಕರ್ತನಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಬಳಿಕ ಸಂಘನಿಕೇತನಕ್ಕೆ ತೆರಳಿ ಕಾರ್ಯನಿರ್ವಾಹರನ್ನು ಭೇಟಿಯಾಗಿ ನನಗೆ ಆಗಿರುವ ನೋವನ್ನು, ಕಳಕಳಿಯನ್ನು ವ್ಯಕ್ತಪಡಿಸಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಭರವಸೆಯನ್ನು ಪಡಕೊಂಡಿದ್ದೇನೆ. ಇದು ನಾನು ಸಂಘಟನೆಯಿಂದ ಕೇಳಿದ ಪ್ರಥಮ ಮತ್ತು ಕೊನೆಯ ಅವಕಾಶವಾಗಿದ್ದು ಮುಂದಿನ ದಿನಗಳಲ್ಲಿ ನಾನು ಪಕ್ಷದಿಂದ ಯಾವುದೇ ಅಪೇಕ್ಷೆಯನ್ನು ಪಡುವುದಿಲ್ಲವೆಂಬ ಭರವಸೆಯನ್ನು ನಮ್ಮ ಪಕ್ಷದ ನಾಯಕರಾದ ಹರೀಶ್ ಕಂಜಿಪಿಲಿ ಇವರಲ್ಲಿ ವ್ಯಕ್ತಪಡಿಸಿದ್ದೇನೆ. ನಾನು ನಾಮಪತ್ರ ಹಿಂತೆಗೆದುದರ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು, ಅವರಿಗೆ ನನ್ನ ನಡೆಯನ್ನು ಸಮರ್ಥಿಸಿದ್ದೇನೆ. ಈ ಘಟನೆಯಿಂದ ಬೇಜಾರಾಗಿದ್ದರೂ ಮರುದಿನದಿಂದಲೇ ನನ್ನ ಜವಾಬ್ದಾರಿಯನ್ನು ಸಹಕಾರಿ ಸಂಘದಲ್ಲಿ ನಿರ್ವಹಿಸಿ ಸಾಲ ವಸೂಲಾತಿಯತ್ತ ಗಮನಹರಿಸಿದ್ದೇನೆ. ಮಾರ್ಚ್ ೧೯ ಮತ್ತು ೨೦ರಂದು ನಮ್ಮ ಸಂಘದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿ ಕೆಲಸವನ್ನು ಮುಗಿಸಿಕೊಂಡು ಮರಳಿ, ಮರುದಿನ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ವೆಂಕಟ್ ದಂಬೆಕೋಡಿ ಭೇಟಿಯಾದಾಗ ಅವರಿಗೆ ಮತ ನೀಡಿ ಬೆಂಬಲಿಸುವ ಭರವಸೆಯನ್ನು ನೀಡಿದ್ದೇನೆ.

ಮಾರ್ಚ್ ೨೨ರಂದು ನಡೆದ ಚುನಾವಣೆಯಲ್ಲಿ ಮತಗಟ್ಟೆಯ ಬಳಿ ತೆರಳುವಾಗಲೂ ವೆಂಕಟ್ ದಂಬೆಕೋಡಿಯವರನ್ನು ಭೇಟಿಮಾಡಿ ನನ್ನ ಬೆಂಬಲವನ್ನು ಸೂಚಿಸಿದ್ದೇನೆ. ಅಭರ್ಥಿಯ ಏಜೆಂಟ್, ಹಿರಿಯರಾದ ಎ.ವಿ.ತೀರ್ಥರಾಮರಿಗೆ “ಮತವನ್ನು ತೋರಿಸಿ ಹಾಕಬೇಕೇ” ಎಂಬ ಮಾತನ್ನು ಕೇಳಿದಾಗ ನನ್ನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಚುನಾವಣೆ ಪ್ರಕ್ರಿಯೆ ಮುಗಿದು ಊರಿಗೆ ಹಿಂತಿರುಗಿದ ಬಳಿಕ ಊರಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಪಲಿತಾಂಶವನ್ನು ತಡವಾಗಿ ತಿಳಿದುಕೊಂಡಿದ್ದೇನೆ. ಏಳು ಮಂದಿ ಅಡ್ದ ಮತದಾನ ಮಾಡಿದ್ದಾರೆ ಎಂಬ ಅಘಾತಕಾರಿ ಅಂಶ ಗೊತ್ತಾಗಿ ಹರೀಶ್ ಕಂಜಿಪಿಲಿಯವರಿಗೆ ಫೋನ್ ಮಾಡಿ ದು:ಖವನ್ನು ವ್ಯಕ್ತಪಡಿಸಿದ್ದೇನೆ.

ಮುಂದಿನ ಬೆಳವಣಿಗೆಗಳು ತಮಗೆಲ್ಲಾ ತಿಳಿದೇ ಇದೆ. ನಾಮ ಪತ್ರ ಸಲ್ಲಿಸಿ ಹಿಂತೆಗೆದುಕೊಂಡದ್ದರಿಂದ ನನ್ನ ಮೇಲೆ ಅನುಮಾನ ಮೂಡುವುದು ಸಹಜ. ಆದರೆ ಆ ಅನುಮಾನವನ್ನು ಪರಿಹರಿಸಲು ನಾನು ಬದ್ಧನಾಗಿದ್ದು ಪಕ್ಷದ ಹಿರಿಯರು ಕರೆದಿರುವ ಸಭೆಯಲ್ಲಿ ಭಾಗವಹಿಸಿ ನನ್ನ ಅಭಿಪ್ರಾಯವನ್ನು ತಿಳಿಸಲಿದ್ದೇನೆ ಮತ್ತು ಹಿರಿಯರು ಕೈಗೊಳ್ಳುವ ಯಾವುದೇ ತೀರ್ಮಾನಗಳಿಗೆ ಬದ್ಧವಾಗಿದ್ದು ಒಂದೆರಡು ದಿನಗಳಲ್ಲಿ ನನ್ನ ಸಹಕಾರಿ ಸಂಘದ ವ್ಯಾಪ್ತಿಯ ಕಾರ್ಯಕರ್ತರನ್ನು ಸೇರಿಸಿ ಅವರ ಅಭಿಪ್ರಾಯವನ್ನು ಪಡಕೊಂಡು ಹಿರಿಯರು/ಕಾರ್ಯಕರ್ತರು ಸೂಚಿಸಿದ ಸತ್ಯಕ್ಷೇತ್ರದಲ್ಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತೇನೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.