Breaking News

ಸುಬ್ರಹ್ಮಣ್ಯ: ಠಾಣೆ ಎದುರು ಧರಣಿಗೆ ಮುಂದಾದ ವೃದ್ಧ ದಂಪತಿಗಳು

Advt_Headding_Middle
Advt_Headding_Middle

ಐವತೊಕ್ಲು ಗ್ರಾಮದ ತೋಟದಮನೆ ವೃದ್ಧ ದಂಪತಿಗಳಿಬ್ಬರು ನ್ಯಾಯ ಕೊಡಿಸಿ ಎಂದು ಸುಬ್ರಹ್ಮಣ್ಯ ಠಾಣೆ ಮುಂದು ಧರಣಿ ಕುಳಿತುಕೊಳ್ಳಲು ಮುಂದಾದ ಘಟನೆ ಮತ್ತು ಠಾಣಾ ಎಸ್.ಐ ಅವರನ್ನು ಕರೆಸಿ ನ್ಯಾಯ ಕೊಡಿಸುವ ಭರವಷೆ ನೀಡಿದ ಘಟನೆ ಸುಬ್ರಹ್ಮಣ್ಯದಿಂದ ಮಾ.೨೬ ರಂದು ವರದಿಯಾಗಿದೆ .
ಪಂಜ ಐವತ್ತೋಕ್ಲು ಗ್ರಾಮದ ತೋಟದಮನೆ ವೆಂಕಟ್ರಮಣ ಗೌಡ ಅವರಿಗೂ ನೆರೆಹೊರೆಯ ಮೂರು ಮನೆಯವರಿಗೂ ರಸ್ತೆ, ನೀರು ವಿಚಾರದಲ್ಲಿ ವರಷದ ಹಿಂದಿನಿಂದಲೂ ವ್ಯಾಜ್ಯವಿತ್ತು. ಪ್ರಕರಣಕ್ಕೆ ಸಂಬಂದಿಸಿ ನೆರೆ ಮನೆಯವರಾದ ತೋಟದ ಮನೆಯ ಸೀತಮ್ಮ, ಗೌರಮ್ಮ ಮೀನಾಕ್ಷಿ, ಜಗದೀಶ ಎಂಬವರು ಕಿರುಕುಳ ನೀಡುತ್ತಿರುವ ಕುರಿತು ತೋಟದಮನೆ ವೆಂಕಟ್ರಮಣ ಗೌಡ ಹಾಗೂ ಅವರ ಪುತ್ರ ಸುನೀಲ್ ಕುಮಾರ್ ಅವರ ಪತ್ನಿ ಮಮತಾಮಣಿ ಸುಬ್ರಹ್ಮಣ್ಯ ಠಾಣೆಗೆ ವಾರದ ಹಿಂದೆ ಪ್ರತ್ಯೇಕ ದೂರು ನೀಡಿದ್ದರು.
ಠಾಣೆಯಲ್ಲಿ ದೂರು ಸ್ವೀಕರಿಸಿದ ಬಳಿಕ ಸುಬ್ರಹ್ಮಣ್ಯ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮತ್ತು ಸಿಬಂದಿಗಳು ತನಿಖೆಗೆಂದು ವ್ಯಾಜ್ಯವಿರುವ ಘಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಇತ್ತಂಡಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ ದೂರಿಗೊಳಗಾದವರನ್ನು ತನಿಖೆಗೆ ಒಳಪಡಿಸಿ ಅವರಿಂದ ಹೇಳಿಕೆ ಪಡೆದು ಅವರಿಗೆ ಎಚ್ಚರಿಕೆ ನೀಡಿ ಮುಂದೆ ಕಿರುಕುಳ ನೀಡದಂತೆ ಸೂಚಿಸಿದ್ದರು.
ಬಳಿಕವೂ ಪಕ್ಕದ ಮನೆಯವರಿಂದ ಕಿರುಕುಳ ಮುಂದುವರೆದಿದೆ. ಪೊಲೀಸರು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ಬಡವರು ಮತ್ತು ಆಶಕ್ತರಾದ ನಮಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಾವು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ದೂರುದಾರರಾದ ವೃದ್ಧ ವೆಂಕಟ್ರಮಣ ಗೌಡ, ಮತ್ತು ಅವರ ಪತ್ನಿ ಮಗ ಸುನೀಲ್ ಕುಮಾರ್, ಸೊಸೆ ಮಮತಾಮಣಿ ಸುಬ್ರಹ್ಮಣ್ಯ ಠಾಣೆಗೆ ಬಂದು ಠಾಣೆ ಎದುರಿನ ಮೆಟ್ಟಿಲ ಬಳಿ ಕುಳಿತು ನ್ಯಾಯಕ್ಕಾಗಿ ಧರಣಿ ನಡೆಸಲು ಮುಂದಾದರು.
ಈ ವೇಳೆ ಪೊಲೀಸರು ಧರಣಿ ನಿರತರನ್ನು ತಡೆದು ಕುಳಿತಲ್ಲಿಂದ ಎಬ್ಬಿಸಿದರು. ಬಳಿಕ ಅವರ ಜೊತೆ ಮಾತುಕತೆ ನಡೆಸಿದ ಎಸ್‌ಐ ಮಲ್ಲಿಕಾರ್ಜುನ ಅವರು ದೂರು ಹಿನ್ನಲೆಯಲ್ಲಿ ಕೈಗೊಂಡ ಕ್ರಮದ ಕುರಿತು ಅವರಿಗೆ ವಿವರಣೆ ನೀಡಿದರು. ಜಾಗದ ವಿಚಾರಕ್ಕೆ ಸಂಬಂದಿಸಿ ವ್ಯಾಜ್ಯ ಇರುವುದರಿಂದ ಅವುಗಳನ್ನು ಕಂದಾಯ ಇಲಾಖೆಯಲ್ಲಿ ದೂರು ನೀಡಿ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು. ಕಿರುಕುಳ ನೀಡಿದ ಕುರಿತು ನೀಡಿರುವ ದೂರಿಗೆ ಸಂಬಂದಿಸಿ ದೂರಿಗೊಳಗಾದವರಿಗೆ ಎಚ್ಚರಿಕೆ ನೀಡಿದ್ದೇವೆ. ಮುಂದೆ ಮತ್ತೆ ನಿಮ್ಮ ತಂಟೆಗೆ ಬರದಂತೆ ತಿಳುವಳಿಕೆ ನೀಡಿದ್ದೇವೆ. ಮುಂದೆ ಮತ್ತೆ ನಿಮಗೆ ಕಿರುಕುಳ ನೀಡಿದರೆ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸುತ್ತೇವೆ ಎಂದು ಧೈರ್ಯ ತುಂಬಿದರು. ವೃದ್ಧರಿಗೆ ಮತ್ತು ಕುಟುಂಬದವರಿಗೆ ಧೈರ್ಯ ಮತ್ತು ಸಾಂತ್ವಾನ ಹೇಳಿ ಅವರನ್ನು ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.