ಕಟೀಲ್ ಕಳಪೆ ಸಂಸದ: ರಮಾನಾಥ ರೈ – ಮೋದಿಗೇಕೆ ವೋಟು ಕೊಡಬೇಕು?: ಪ್ರಶ್ನೆ

Advt_Headding_Middle
Advt_Headding_Middle

ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅತ್ಯಂತ ಕಳಪೆ ಸಂಸದ. ಈ ಮಾತನ್ನು ನಾನು ಹೇಳುತ್ತಿಲ್ಲ. ಅವರ ಪಕ್ಷದವರೇ ಹೇಳುತ್ತಿದ್ದಾರೆ. ನಳಿನ್‌ಗೆ ಮತ ಅಲ್ಲ- ಮೋದಿಗಾಗಿ ಮತ ಎನ್ನುತ್ತಿದ್ದಾರೆ. ಮೋದಿಗೆ ದ.ಕ.ಜಿಲ್ಲೆಯವರು ಯಾಕೆ ಮತ ನೀಡಬೇಕು? ದ.ಕ. ಜಿಲ್ಲೆಗೆ ಮೋದಿಯ ಕೊಡುಗೆ ಏನು?” ಎಂದು ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.
ಇಂದು (ಮಾ.೨೭) ಸುಳ್ಯದಲ್ಲಿರುವ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. “ಕಿದು ತೋಟಗಾರಿಕಾ ಸಂಸ್ಥೆಯನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ದ.ಕ.ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿರುವ ವಿಜಯಾ ಬ್ಯಾಂಕ್‌ನ್ನು ಗುಜರಾತಿನ ಬೇರೆ ಬ್ಯಾಂಕಿನೊಂದಿಗೆ ವಿಲೀನ ಮಾಡಲು ಆದೇಶ ಮಾಡಿದ್ದಾರೆ. ಪಂಪ್‌ವೆಲ್ ಮೇಲು ಸೇತುವೆಯ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಗುಂಡ್ಯ- ಬಂಟ್ವಾಳ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಈ ಕೆಲಸಗಳಿಗಾಗಿ ಮೋದಿಗೆ ವೋಟು ಕೊಡಬೇಕೆ? ಇಂತಹ ಕೆಲಸ ಮಾಡದ ಸಂಸದ ನಮ್ಮ ಪ್ರತಿನಿಧಿಯಾಗಬೇಕೆ? ಇದನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಗೆ ಸ್ಪರ್ಧಿಸುವ ಅವಕಾಶವನ್ನು ನೀಡಲಾಗಿದೆ. ಅವರು ಗೆದ್ದರೆ ವಿಜಯಾ ಬ್ಯಾಂಕ್ ವಿಲೀನವಾಗಲು ಬಿಡುವುದಿಲ್ಲ. ಕಿದು ತೋಟಗಾರಿಕಾ ಸಂಸ್ಥೆ ಸ್ಥಳಾಂತರಗೊಳ್ಳಲು ಬಿಡುವುದಿಲ್ಲ. ಸ್ಥಗಿತಗೊಂಡ ಕಾಮಗಾರಿಗಳು ಚುರುಕಿನಿಂದ ಪೂರ್ಣಗೊಳ್ಳುವಂತೆ ಮಾಡುತ್ತಾರೆ” ಎಂದು ರಮಾನಾಥ ರೈ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಪಿ.ಸಿ.ಜಯರಾಮ ಹಾಗೂ ಟಿ.ಎಂ.ಶಹೀದ್, ಕಡಬದ ಜಿ.ಪಂ. ಸದಸ್ಯ ಪಿ.ಪಿ.ವರ್ಗಿಸ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ, ಕೆ.ಪಿ.ಸಿ.ಸಿ. ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ, ಸಂಶುದ್ಧೀನ್, ಮುಸ್ತಫಾ, ಮಹಮ್ಮದ್ ಕುಂಞಿ ಗೂನಡ್ಕ, ಪಿ.ಎಸ್.ಗಂಗಾಧರ್, ಶ್ರೀಮತಿ ರಾಜೀವಿ ಆರ್.ರೈ, ಅನಿಲ್ ರೈ ಬೆಳ್ಳಾರೆ, ಶಕುಂತಳಾ ನಾಗರಾಜ್, ಶ್ರೀಮತಿ ಗೀತಾ ಕೋಲ್ಚಾರ್, ಮೋಹಿನಿ ಪೆಲತ್ತಡ್ಕ, ಸಿದ್ಧೀಕ್ ಕೊಕ್ಕೋ, ಚಂದ್ರಶೇಖರ ಕಾಮತ್, ಲಕ್ಷ್ಮಣ ಶೆಣೈ, ಶಾಫಿ ಕುತ್ತಮೊಟ್ಟೆ, ವಿಜೇಶ್ ಹಿರಿಯಡ್ಕ, ಭೀರಾ ಮೊಯ್ದೀನ್, ಅನುಸೂಯ ಪೆರುವಾಜೆ, ದಿನೇಶ ಅಂಬೆಕಲ್ಲು, ನಂದರಾಜ ಸಂಕೇಶ ಶ್ರೀಮತಿ ದಿವ್ಯಾಪ್ರಭ ಚಿಲ್ತಡ್ಕ, ಎಮ್.ಮಾಧವ ಗೌಡ, ಸಚಿನ್ ರಾಜ್ ಶೆಟ್ಟಿ, ಪ್ರವೀಣ ಮರುವಂಜ, ತಿರುಮಲೇಶ್ವರಿ ಅರ್ಭಡ್ಕ, ಕಾಂತಿ ಸಂಪಾಜೆ, ಆಶೋಕ್ ಚೂಂತಾರು, ತೀರ್ಥರಾಮ ಜಾಲ್ಸೂರು, ಕಂದಸ್ವಾಮೀ, ಶರೀಫ್ ಕಂಠಿ, ಪಿ.ಎ.ಮಹಮ್ಮದ್, ಪರಮೇಶ್ವರ ಕೆಂಬಾರೆ, ಗಣೇಶ್ ಅಡ್ಯಡ್ಕ, ಜಯಪ್ರಕಾಶ್ ನೆಕ್ರೆಪ್ಪಾಡಿ, ಸತ್ಯಕುಮಾರ್ ಆಡಿಂಜ, ಆನಂದ ಬೆಳ್ಳಾರೆ, ನಝೀರ್ ಶಾಂತಿನಗರ, ಓವಿನ್ ಪಿಂಟೋ, ಆರ್.ಕೆ. ಮಹಮ್ಮದ್, ಕೆ.ಕೆ.ಹರಿಪ್ರಸಾದ್, ಡೇವಿಡ್ ಧೀರಾ ಕ್ರಾಸ್ತಾ, ಶ್ರೀಮತಿ ಸುಜಯ ಕೃಷ್ಣ, ಗೋಕುಲ ದಾಸ್, ಜಿ.ಕೆ.ಹಮೀದ್, ಪ್ರಶಾಂತ ಮರುವಂಜ ಮೊದಲಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.