ವಿವಿಧ ಬೇಡಿಕೆ ಮುಂದಿಟ್ಟು ಚುನಾವಣಾ ಬಹಿಷ್ಕಾರದ ಎಚ್ಚರಿಕೆ : ತಹಶೀಲ್ದಾರ್ ಭೇಟಿ, ಸಮಸ್ಯೆ ಇತ್ಯರ್ಥದ ಭರವಸೆ

Advt_Headding_Middle
Advt_Headding_Middle

ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕರಿಸುವ ನಾಮಫಲಕ ಅಳವಡಿಸಿಕೊಂಡಿದ್ದ ಸುಳ್ಯ ನಗರದ ಕುದ್ಪಾಜೆ ಮತ್ತು ಐವರ್ನಾಡು ಗ್ರಾಮದ ಶಾಂತಿಮೂಲೆ ಪ್ರದೇಶಕ್ಕೆ ಸುಳ್ಯ ತಹಶೀಲ್ದಾರ್ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಹಾಗೂ ತಹಶೀಲ್ದಾರ್ ಭರವಸೆಯ ಮೇರೆಗೆ ಮತದಾನ ಬಹಿಷ್ಕಾರದ ನಾಮಫಲಕವನ್ನು ತೆರವುಗೊಳಿಸಿದ ಘಟನೆ ವರದಿಯಾಗಿದೆ.

 

ಸುಳ್ಯ ಕಸಬಾ ಗ್ರಾಮದ ಕುದ್ಪಾಜೆಯಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಿಂದ ನಾವು ದೂರ ಉಳಿಯುವುದಾಗಿ ಹೇಳಿ ಕಾಲೊನಿಯಲ್ಲಿ ನಾಮಫಲಕ ಅಳವಡಿಸಿದ್ದರು. ವಿಷಯ ತಿಳಿದ ಸುಳ್ಯ ನ.ಪಂ. ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಕುಂಞಿ ಅಹಮ್ಮದ್, ಇಂಜಿನಿಯರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಕುದ್ಪಾಜೆ ಪರಿಸರದ ಜನರೊಂದಿಗೆ ಮಾತನಾಡಿದರು. ಬಳಿಕ ರಸ್ತೆ ಅಗಲೀಕರಣಗೊಳಿಸುವ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ತಹಶೀಲ್ದಾರ್ ಭರವಸೆ ನೀಡಿದರು.

 

ಐವರ್ನಾಡು ಶಾಂತಿಮೂಲೆ: ಐವರ್ನಾಡು ಗ್ರಾಮದ ಶಾಂತಿಮೂಲೆ ಪರಿಶಿಷ್ಟ ಪಂಗಡ ಕಾಲೊನಿ ನಿವಾಸಿಗಳು ರಸ್ತೆ, ಕುಡಿಯುವ ನೀರು ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಇಟ್ಟು ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದರು.

ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕುಂಞಿ ಅಹಮ್ಮದ್‌ರವರು ಸಮಸ್ಯೆ ಆಲಿಸಿದರು. ಬಳಿಕ ಸ್ಥಳಕ್ಕೆ ಮೆಸ್ಕಾಂ, ಕೆ.ಎಫ್.ಡಿ.ಸಿ. ಅಧಿಕಾರಿಗಳನ್ನು ಕರೆಸಿಕೊಂಡ ತಹಶೀಲ್ದಾರ್ ಅವರ ಜೊತೆ ಮಾತನಾಡಿದರು. ನಿಮ್ಮ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ. ರಸ್ತೆಗೆ ಸಂಬಂಧಿಸಿದಂತೆ ಈ ಸ್ಥಳವು ಸುರಕ್ಷಿತ ಅರಣ್ಯವಾಗಿರುವುದರಿಂದ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಜಂಟಿ ಕ್ರಿಯಾಯೋಜನೆ ತಯಾರಿಸುತ್ತೇವೆಂದು ತಹಶೀಲ್ದಾರ್ ಭರವಸೆ ನೀಡಿದರು. ಅಲ್ಲದೆ ಮತದಾನದಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಈ ಸಂದರ್ಭ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಹೆಚ್.ವಿ.ಇದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.