ನಗರದಲ್ಲಿ ನೀರು ಸಮಸ್ಯೆ : ತಹಶೀಲ್ದಾರ್ ಸ್ಪಂದನೆ

Advt_Headding_Middle
Advt_Headding_Middle


ಸುಳ್ಯ ನಗರದ ಕುರುಂಜಿಭಾಗ್ ಉಜಿರುಗುಳಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ತಹಶೀಲ್ದಾರ್ ಸ್ಪಂದನೆ ನೀಡಿದ್ದಾರೆ.
ಮಾ. 26 ರಿಂದಲೇ ಈ ಭಾಗದಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿತ್ತು. ಮಾ.27 ರಂದು ಸಂಜೆ ಉಜಿರುಗುಳಿ ಪ್ರದೇಶದ ಜನರು ನಗರ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಕುಂಞಿ ಅಹ್ಮದ್‌ರವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಇಂಜಿನಿಯರ್ ಶಿವಕುಮಾರ್‌ಗೂ ಮುಖ್ಯಾಧಿಕಾರಿ ಮತ್ತಡಿಯವರಿಗೂ ವಿಷಯ ತಿಳಿಸಲಾಯಿತು. ತಹಶೀಲ್ದಾರ್ ಕುಂಞಿ ಅಹ್ಮದ್‌ರವರು ಮಾ. ೨೮ರಂದು ಬೆಳಿಗ್ಗೆ ಟ್ಯಾಂಕರ್ ಮೂಲಕ ನೀರಿನ ಸಮಸ್ಯೆ ಇದ್ದ ಪ್ರದೇಶಗಳಿಗೆ ನೀರು ಒದಗಿಸುವ ಮೂಲಕ ಸಮಸ್ಯೆ ನಿವಾರಿಸಿದ್ದಾರೆ.

ಬೋರಿನಲ್ಲಿ ನೀರು ಇಂಗಿದೆ:
ಈ ಭಾಗದಲ್ಲಿ ಮೊನ್ನೆಯಿಂದ ನೀರಿನ ಸಮಸ್ಯೆ ಆಗುತ್ತಿದೆ. ಇಲ್ಲಿರುವ ಕೆಲವು ಬೋರುಗಳಲ್ಲಿ ನೀರು ಆರಿಹೋಗಿದೆ. ನೀರು ಇರುವ ಬೋರಿನಿಂದ ತಗ್ಗು ಪ್ರದೇಶಗಳಿಗೆ ನೀರು ಕೊಡುವ ವ್ಯವಸ್ಥೆ ಆಗುತ್ತಿದೆ. ಎತ್ತರ ಪ್ರದೇಶದಲ್ಲಿರುವವರಿಗೆ ಈ ನೀರು ಸಾಕಾಗುತ್ತಿಲ್ಲ ಎಂದು ನ.ಪಂ. ಮಾಜಿ ಸದಸ್ಯ ಕಿರಣ್ ಕುರುಂಜಿ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.