ರೋಟರಿ ಕ್ಲಬ್ ಸುಳ್ಯ: ಚಾರ್ಟರ್ ನೈಟ್ ಕಾರ್ಯಕ್ರಮ

Advt_Headding_Middle
Advt_Headding_Middle

ರೋಟರಿ ಕ್ಲಬ್ ಸುಳ್ಯ ಇದರ ಚಾರ್ಟರ್ ನೈಟ್ ಸಮಾರಂಭವು ದಯಾನಂದ ಆಳ್ವರ ನಿವಾಸ ಪದ್ಮಶ್ರೀ ಜಟ್ಟಿಪಳ್ಳದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೋ. ಎಸ್. ದಯಾನಂದ ಆಳ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಲ್ ನಿಟ್ಟಿಗುತ್ತು ಶರತ್ ಭಂಡಾರಿಯವರು ಹಾಗೂ ಪಿ.ಬಿ ದಿವಾಕರ ರೈ ಪೆರಾಜೆ ರವರು ಆಗಮಿಸಿದ್ದರು. ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ರೊ. ಆಸ್ಕರ್ ಆನಂದ್, ಐ.ಪಿ.ಪಿ. ರೊ. ಎನ್.ಎ ಜಿತೇಂದ್ರ, ಕಾರ್ಯದರ್ಶಿ ರೊ. ಡಾ. ಗುರುರಾಜ್ ವೈಲಾಯ, ಮುಂದಿನ ಸಾಲಿನ ಅಧ್ಯಕ್ಷ ರೊ. ಡಾ. ಪುರುಷೋತ್ತಮ ಹಾಗೂ ಶ್ರೀಮತಿ ಜಯಲಕ್ಷ್ಮಿ ಡಿ. ಆಳ್ವರು ಉಪಸ್ಥಿತರಿದ್ದರು.


ಅಲ್ಲದೇ ಇತ್ತೀಚೆಗೆ ವಿ.ಟಿ.ಯು ನಿಂದ ಗೌರವ ಡಾಕ್ಟರೇಟ್ ಪಡೆದ ರೊ. ಗಿರೀಶ್ ಭಾರಾದ್ವಾಜ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ೨೩ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ರೊ. ಸನತ್ ಹಾಗೂ ರೊ. ದಯಾನಂದ ಆಳ್ವರಿಗೆ ಪಿ.ಹೆಚ್.ಎಫ್ ಪ್ರಧಾನ ಮಾಡಲಾಯಿತು. ಕರ್ನಲ್ ಶರತ್ ಭಂಡಾರಿಯವರು ತಮ್ಮ ಭಾಷಣದಲ್ಲಿ ಕಾಶ್ಮೀರ ಸಮಸ್ಯೆಯ ವಿವಿಧ ಆಯಾಮಗಳನ್ನು ಸಭೆಗೆ ವಿವರಿಸಿದರು. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರು ಅವರ ಕುಟುಂಬದೊಂದಿಗೆ ಹಾಗೂ ಇತರ ಗಣ್ಯ ಅತಿಥಿಗಳು ಭಾಗವಹಿಸಿದ್ದರು. ರೊ. ಗುರುರಾಜ್ ವೈಲಾಯ ವಂದನಾರ್ಪಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.