ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Advt_Headding_Middle
Advt_Headding_Middle

ಕೆ.ವಿ.ಜಿ. ಕಾನೂನು ಕಾಲೇಜು ಸುಳ್ಯ ಇದರ ವಾರ್ಷಿಕ ಕ್ರೀಡಾಕೂಟ ಮಾ. 27 ರಂದು ಕೆ.ವಿ.ಜಿ. ಕ್ರೀಡಾಂಗಣದಲ್ಲಿ ಜರುಗಿತು.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ. ವಹಿಸಿದ್ದರು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಿ. ಜವರೇಗೌಡ ಉಪಸ್ಥಿತರಿದ್ದರು. ದೈಹಿಕ ನಿರ್ದೇಶಕರುಗಳಾದ ಸೀತಾರಾಮ್. ಎಮ್. ಡಿ, ಯತಿರಾಜ್.ಬಿ ಮತ್ತು ನಾಗರಾಜ್ ಹಾಗೂ ಕ್ರೀಡಾಸಂಯೋಜಕ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ಶ್ಯಾಮ್‌ಪ್ರಸಾದ್. ಎನ್.ಕೆ. ಪ್ರತಿಜ್ನಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್. ಎಮ್.ಕೆ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ. ಪಿ. ಬಿ ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅರ್ಪಿತಾ. ಜೆ ನಿರೂಪಿಸಿದರು. ಉಪನ್ಯಾಸಕರಾದ ರಂಜನ್ ಕುಯಿಂತೋಡು, ಕೌಶಿಕ್. ಸಿ ನೇತೃತ್ವ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.