ಏ. 1 ರಿಂದ 10 : ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಬೇಸಿಗೆ ಶಿಬಿರ

Advt_Headding_Middle
Advt_Headding_Middle

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಬೇಸಿಗೆ ವಿಶೇಷ ಶಿಬಿರವು ವೈವಿಧ್ಯಮಯ ಚಟುವಟಿಕೆಗಳೊಂದಿಗೆ ಏ. 1 ರಿಂದ ಏ. 10 ರ ತನಕ ಶಾಲಾ ಆವರಣದಲ್ಲಿ ನಡೆಯಲಿದೆ.

ಏ. 1 ರಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಶಿಬಿರವನ್ನು ಉದ್ಘಾಟನೆ ಮಾಡಲಿದ್ದಾರೆ. ಅವರು ಮಾ. 31 ರಂದು ಬೆಳ್ಳಾರೆಗೆ ಆಗಮಿಸಿ ಅಂದು ರಾತ್ರಿ ಶಾಲೆಯಲ್ಲಿ ತಂಗಲಿದ್ದಾರೆ. ಏ. 1 ರಂದು ಬೆಳಿಗ್ಗೆ 9 .೦೦ ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಾಲುಮರದ ತಿಮ್ಮಕ್ಕ ಮೆರವಣಿಗೆಯ ಮೂಲಕ ಸಾಗಿ ಗಿಡ ನೆಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ರಂಗಾಯನ ಪ್ರಬುದ್ಧ ಕಲಾವಿದೆ ಎಂ.ಎಸ್. ಗೀತಾ ಮೋಂಟಡ್ಕ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ. ಶಿಬಿರವು ಏ. 1೦ರ ತನಕ ನಡೆಯಲಿದ್ದು, ಪ್ರತೀ ದಿನ ಬೆಳಿಗ್ಗೆ 1೦.೦೦ ಗಂಟೆಯಿಂದ ಮಧ್ಯಾಹ್ನ 1.೦೦ ಗಂಟೆಯ ತನಕ ನಡೆಯಲಿದೆ. ಏ. 2 ರಂದು ಸಂಪನ್ಮೂಲ ವ್ಯಕ್ತಿಯಾಗಿ ರಮೇಶ್ ಕೆ.ಪಿ. ಭಾಗವಹಿಸಿ ಕಾರ್ಟೂನ್ ರಚನೆಯ ಬಗ್ಗೆ ತರಬೇತಿ, ಏ. 3 ರಂದು ಭಾರತೀಯ ವಿದ್ಯಾಭವನ ಕೊಡಗು ಇಲ್ಲಿಯ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್‌ರಿಂದ ಚಿತ್ರಕಲಾ ತರಬೇತಿ, ಏ. 4 ರಂದು ಭುವನ್ ಮಂಗಳೂರುರವರಿಂದ ಕ್ರಾಪ್ಟ್ ಮೇಕಿಂಗ್ ತರಬೇತಿ, ಏ. ೫ರಂದು ಅಕ್ಷಯ್‌ರಾಜ್‌ರವರಿಂದ ಕ್ಲೇ ಮೋಡೆಲಿಂಗ್ ತರಬೇತಿ, ಏ. 6ರಂದು ಶೃತಿಯವರಿಂದ ಡೆಕೋಪೇಜ್ ಆರ್ಟ್, ಏ. ೭ರಂದು ಕುಂಬಾರರ ಗುಡಿ ಕೈಗಾರಿಕಾ ಸಂಘದ ವತಿಯಿಂದ ಮಣ್ಣಿನ ಮಡಕೆ ತಯಾರಿ, ಏ. 8 ರಂದು ಎನ್‌ವಿರಾನ್‌ಮೆಂಟ್ ಎಸೋಸಿಯೇಶನ್ ಮೂಡಿಗೆರೆ ಇವರಿಂದ ಇನ್ಸೆಕ್ಟ್ ವಲ್ಡ್ ಮಾಹಿತಿ ಮತ್ತು ಪ್ರಾತ್ಯಕ್ಷತೆ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಸ್. ಪುರುಷೋತ್ತಮರಿಂದ ಗ್ರೀಟಿಂಗ್ಸ್ ಕಾರ್ಡ್ ತಯಾರಿ, ಏ. 9 ರಂದು ಕಾರ್ಕಳ ಶಿಕ್ಷಣಾಧಿಕಾರಿ ಶಶಿಧರ್‌ರವರಿಂದ ಮುಂದಿನ ಬದುಕಿಗೊಂದು ಅಂದದ ಬರವಣಿಗೆ ತರಬೇತಿ ಹಾಗೂ ಏ. 1೦ರಂದು ಸಮಾರೋಪದೊಂದಿಗೆ ಶಿಬಿರಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಇವುಗಳೊಂದಿಗೆ ರಂಗ ತರಬೇತಿ, ರಂಗ ಗೀತೆ, ನಾಟಕ ಅಭ್ಯಾಸ ಹಾಗೂ ಸೃಜನಾತ್ಮಕ ಕ್ರೀಡಾ ಚಟುವಟಿಕೆಗಳು ನೀನಾಸಂನ ಸಂಪನ್ಮೂಲ ವ್ಯಕ್ತಿ ಅರುಣ್ ಮಾನ್ವಿ ನಡೆಸಿಕೊಡಲಿದ್ದಾರೆ. eನ ಗಂಗಾ ಶಾಲೆಯ ಮಕ್ಕಳೊಂದಿಗೆ ಆಶಕ್ತಿಯುಳ್ಳ ಬೇರೆ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ವಿವಿಧ ಕಡೆಗಳಿಂದ ಸ್ಕೂಲ್ ಬಸ್‌ನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶಾಲಾ ಸಂಚಾಲಕ ಉಮೇಶ್ ಎಂ.ಪಿ. ತಿಳಿಸಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಸುದ್ದಿ ಮೀಡಿಯಾ ವತಿಯಿಂದ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.