ಬಾಲಚಂದ್ರ ಕಳಗಿ ಸಾವು ಅಪಘಾತದಿಂದಲ್ಲ, ಕೊಲೆ : ಶಂಕಿತ ಆರೋಪಿಗಳು ಪೊಲೀಸ್ ವಶ?

Advt_Headding_Middle
Advt_Headding_Middle

ಕಳೆದ ವಾರ ಮಡಿಕೇರಿ ಬಳಿ ವಾಹನ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ದುರ್ಮರಣಕ್ಕೀಡಾದ ಘಟನೆಗೆ ಟ್ವಿಸ್ಟ್ ದೊರೆತಿದ್ದು, ಇದೊಂದು ಸಹಜ ಅಪಘಾತ ಪ್ರಕರಣವಾಗಿರದೆ ಕೊಲೆಗೆ ನಡೆಸಿದ ಕೃತ್ಯ ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕಳಗಿ ಸಾವಿನ ಬೆನ್ನಿಗೆ ಇಂತಹ ಅನುಮಾನಗಳು ವ್ಯಕ್ತವಾಗಿತ್ತು. ಮರಳು ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಬಾಲಚಂದ್ರ ಕಳಗಿಯವರು ತಡೆಯಾಗುತ್ತಿದ್ದಾರೆಂದು ಅವರನ್ನು ಕೊಲೆ ನಡೆಸಿದ ಸಂಶಯವಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ದೂರಿತ್ತು. ಅಪಘಾತ ನಡೆದ ಸ್ಥಳ ಕಳಗಿಯವರು ಓಡಾಡುವ ರಸ್ತೆ ಅಲ್ಲದ್ದರಿಂದ ಮನೆಯವರಿಗೂ ಈ ಘಟನೆಯ ಬಗ್ಗೆ ಸಂಶಯ ಮೂಡಿ ಕಳಗಿಯವರ ಚಿಕ್ಕಪ್ಪ ಕೂಡಾ ಪೊಲೀಸ್ ದೂರು ನೀಡಿದ್ದರು. ಈ ದೂರಿನಲ್ಲಿ ಅವರು ಸಂಪಾಜೆಯ ದಂಪತಿಯ ಹೆಸರನ್ನು ಉಲ್ಲೇಖಿಸಿದ್ದರು. ಆದರೆ ಪೊಲೀಸ್ ತನಿಖೆಯ ವೇಳೆ ಘಟನೆಗೂ ಇವರಿಗೂ ಸಂಬಂಧವಿಲ್ಲವೆಂದು ಪೊಲೀಸರು ಕಂಡುಕೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಮರಳು ಮಾಫಿಯಾ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ಕೊಡಗು ಸಂಪಾಜೆ ಮತ್ತು ಕಲ್ಲುಗುಂಡಿಯ ವ್ಯಕ್ತಿಗಳಿಬ್ಬರು ಸೇರಿ ಲಾರಿ ಚಾಲಕನ ಮೂಲಕ ಈ ಕೃತ್ಯ ನಡೆಸಿರಬೇಕೆಂದು ಪೊಲೀಸರು ಅಂದಾಜಿಸಿದ್ದಾರೆ. ಶಂಕಿತ ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.