ಮುಚ್ಚಿಲ: ಏ. 2 ರಂದು ಸ್ವಲಾತ್ ವಾರ್ಷಿಕ,  ಧಾರ್ಮಿಕ ಉಪನ್ಯಾಸ

Advt_Headding_Middle
Advt_Headding_Middle

ಎಣ್ಮೂರು -ಮುಚ್ಚಿಲ ರಿಫಾಯಿಯ್ಯ ಮಸ್ಜಿದ್‌ನಲ್ಲಿ 11 ನೇ ವರ್ಷದ ಸ್ವಲಾತ್ ವಾರ್ಷಿಕ ಕಾರ್ಯಕ್ರಮ,ಧಾರ್ಮಿಕ ಉಪನ್ಯಾಸ ತಾಜುಲ್ ಉಲಮಾ ನೂತುಲ್ ಉಲಮಾ (ಎಂ.ಎ ಉಸ್ತಾದ್) ಪೊಸೋಟ್ ತಂಙಳ್ ಅನುಸ್ಮರಣೆಂ ಏ. 2 ರಂದು ರಾತ್ರಿ ಗಂಟೆ 7 ರಿಂದ ಮಸೀದಿ ಸಭಾಂಗಣದಲ್ಲಿ ಜರುಗಲಿದೆ.

ಎಣ್ಮೂರು-ಮುಚ್ಚಿಲ ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಅಲ್-ಬುಖಾರಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯಿದ್ ಇಬ್‌ನ್ ಮೌಲಾ ತಂಙಳ್ ಅಲ್-ಬಖಾರಿ ಚೇಲಕ್ಕಾಡ್-ಕೇರಳ ಕೂಟು ಪ್ರಾರ್ಥನೆ ಮಾಡಲಿದ್ದಾರೆ.

ಸಮಾರಂಭವನ್ನು ಅಲ್ ಹಾಜ್ ಮಹ್‌ಮೂದ್ ಫೈಝಿ ಓಲೆಮುಂಡೋವು ಉದ್ಘಾಟಿಸಲಿದ್ದಾರೆ. ಇಕ್ಬಾಲ್ ಫಾಳಲಿ ಮುದರ್ರಿಸ್ ಬೊಳ್ಮಾರು, ಅಸ್ಸಯ್ಯದ್ ಕುಂಞಕೋಯ ಮುಖ್ಯ ಪ್ರಭಾಷಣ ಮಾಡುವರು. ಸ್ವಲಾಹುದ್ದೀನ್ ಸಖಾಫಿ ಮೂಡನ್ನೂರು, ಮುದರ್ರಿಸ್ ಅಲ್-ಮದೀನತುಲ್ ಮುನವ್ವರ ಮೂಡಡ್ಕ ಅನುಸ್ಮರಾಣಾ ಪ್ರಭಾಷಣ ಮಾಡಲಿದ್ದು, ವೇದಿಕೆಯಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಲಾತ್ ಸಮಿತಿ ಅಧ್ಯಕ್ಷ ಮಹಮ್ಮದ್ ಮರಕ್ಕಡ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.