Breaking News

ಕಾವು ಶ್ರೀ ಪಂಚಲಿಂಗೇಶ್ವರ ಜಾತ್ರೆ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ : ಸಾಧಕ ಶಿವಪ್ರಸಾದ್ ಕೊಚ್ಚಿ ಯವರಿಗೆ ಸ್ವರ ಸಿಂಚನ ಪುರಸ್ಕಾರ ಪ್ರಧಾನ

Advt_Headding_Middle
Advt_Headding_Middle

 

ಕಾವು ಶ್ರೀ ಪಂಚಲಿಂಗೇಶ್ವರ ಜಾತ್ರೆಯ ನಡು ದೀಪೋತ್ಸವದಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾ.25 ರಂದು ಕುಮಾರ್ ಪೆರ್ನಾಜೆ ಸ್ವರ ಸಿಂಚನ ಕಲಾ ತಂಡದ ವತಿಯಿಂದ ಶಿವ ಪ್ರಸಾದ್ ಕೊಚ್ಚಿಯವರಿಗೆ ಸ್ವರ ಸಿಂಚನ ಪುರಸ್ಕಾರ ಪ್ರದಾನ ಮಾಡಿದರು. ಕಾವು ನನ್ಯ ಅಚ್ಚತ ಮೂಡತ್ತಾಯರು, ಕ್ಷೇತ್ರದ ಪವಿತ್ರ ಪಾಣಿಯವರು ಶಾಲು ಹೊದಿಸಿ, ಕುಮಾರ್ ಪೆರ್ನಾಜೆ ಕೃಷಿ, ಸ್ವರ ಸಿಂಚನ ತಂಡದ ಮುಕಾಂತರ ಹಲವಾರು ಗ್ರಾಮೀಣ ಕಲಾ ಪ್ರತಿಭೆಯನ್ನು ಹೊರ ತರುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ನುಡಿದರು. ಸುಬ್ರಹ್ಮಣ್ಯ್ಯ ಭಟ್ ಹಾರ ಹಾಕಿ ಗೌರವಿಸಿದರು.

ಕಾಮ ಹೇಮನಾಥ ಶೆಟ್ಟಿ ಮಾಜಿ ಆಡಳಿತ ಮುಕ್ತೇಸರರು ತಾಂಬೂಲಗಳನ್ನಿತ್ತು ಸಮಾಜ ಸೇವೆ ಮಾಡುವಂತವರನ್ನು ಹುಡುಕಿ ಹೆಕ್ಕುವ ಕೆಲಸ ಪೆರ್ನಾಜೆ ಯವರು ಮಾಡುತ್ತಿರುವುದು ಶ್ಲಾಘನೀಯ ಹಾಗೆ ತನ್ನಂತೆಯೆ ಇತರರು ಎತ್ತರ ಏರುವಂತೆ ಮಾಡುವ ವಿಶೇಷ ಗುಣವಿದೆ ಎಂದು ನುಡಿದರು, ದಿವ್ಯನಾಥ ಶೆಟ್ಟಿ ಕಾವು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ದೇಗುಲದ ಸ್ಮರಣಿಕೆ ಪ್ರಸಾದ ನೀಡಿ ಶುಭ ಹಾರೈಸಿದರು ಸ್ವರ ಸಿಂಚನ ಕಲಾ ತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಸ್ವರ ಸಿಂಚನ ಪುರಸ್ಕಾರ ಸ್ಮರಣಿಕೆಯನ್ನು ನೀಡಿದರು.
ರವಿಶಂಕರ್ ಕಲ್ಲೂರಾಯ, ರಾಮಚಂದ್ರ ಭಟ್ ಮಳಿ, ರಾಘವೇಂದ್ರ ಭಟ್ ಪೆರ್ನಾಜೆ, ಮಹೇಶ್ವರ ಭಟ್ ನನ್ಯ ಪೆರ್ನಾಜೆ, ಸುಬ್ರಾಯ ಬಲ್ಯಾಯ ಮದ್ಲ ಸದಸ್ಯರು, ಮೋನಪ್ಪ ಪೂಜಾರಿ ಕೆರೆಮಾರು ಸದಸ್ಯರು, ಕೊರಗಪ್ಪ ಪೂಜಾರಿ ಕೆರೆಮಾರು, ಶಾರದಮ್ಮ ಪೆರ್ನಾಜೆ, ಸೌಮ್ಯ ಪೆರ್ನಾಜೆ, ಸಿಂಚನ ಲಕ್ಷ್ಮಿ ಕೋಡಂದೂರು, ಮುಂತಾದವರು ವೇದಿಕೆಯಲ್ಲಿ ಇದ್ದರು, ದೇವಣ್ಣ ರೈ ಮುದರ್ ಪಳ್ಳ ಸ್ವಾಗತಿಸಿ ವಂದಿಸಿದರು, ಕುಮಾರ್ ಪೆರ್ನಾಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.