ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ “ಶಿಲಾಬಿಂಬ ಪ್ರತಿಷ್ಠೆ ”-ಸಾವಿರಾರು ಜನರ ಕೈ ಸೇರಿದಾಗ ದೇವಸ್ಥಾನಗಳು, ದೈವಸ್ಥಾನಗಳು,ಸಾನಿಧ್ಯಗಳ ನಿರ್ಮಾಣ ಸಾಧ್ಯ : ಕೇಶವ ತಂತ್ರಿ

Advt_Headding_Middle
Advt_Headding_Middle

ಕಾಣಿಯೂರು: ಹೊಸದಾಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಸಿಗುವ ಫಲಕ್ಕಿಂತ ಹಳೆಯ ದೇವಸ್ಥಾನಗಳು ಜೀರ್ಣೋದ್ಧಾರ ಗೊಂಡಾಗ ದಶ ಪಟ್ಟು ಫಲಗಳು ಸಿಗುತ್ತವೆ. ಸಾವಿರಾರು ಜನರ ಕೈ ಸೇರಿದಾಗ ದೇವಸ್ಥಾನಗಳು, ದೈವಸ್ಥಾನಗಳು ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ದೇವಸ್ಥಾನ ನಿರ್ಮಾಣವಾಗುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಕ್ಷೇತ್ರದ ತಂತ್ರಿ ಕೇಶವ ತಂತ್ರಿ ಅಂಕಶಾಲೆ ಮೂಡಬಿದ್ರೆ ಹೇಳಿದರು.
ಅವರು ಮಾ.೨೫ರಂದು ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ನಡೆದ ಶ್ರೀದೇವರ ಸನ್ನಿಧಾನ ಪುಷ್ಕರಣೀಯ ಸಮೀಪ ನೂತನ ಆರೂಢದಲ್ಲಿ ಶ್ರೀ ಕ್ಷೇತ್ರದ ಸಾನಿಧ್ಯಗಳಾದ ನಾಗದೇವರ, ರಕ್ಷೇಶ್ವರಿ, ವನಶಾಸ್ತ್ತಾರ ಮತ್ತು ಗುಳಿಗ ಶಿಲಾಬಿಂಬ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇನಾಲ ಕ್ಷೇತ್ರದ ಪದ್ಮನಾಭ ಸ್ವಾಮೀಜಿ ಮಾತನಾಡಿ, ದೇವರ ಇಚ್ಚೆ ಹಾಗೂ ಭಕ್ತರ ಶ್ರದ್ದೆಯಿಂದ ಕುಕ್ಕಟ್ಟೆ ಕ್ಷೇತ್ರದ ಜೀರ್ಣೋದ್ದಾರಕ್ಕೆ ಸಮಯ ಕೂಡಿಬಂದಿದ್ದು, ಭಕ್ತರ ಸಹಕಾರದಿಂದ ದೇವಸ್ಥಾನ ಶೀಘ್ರವಾಗಿ ಜೀರ್ಣೋದ್ದಾರವಾಗಲಿ ಎಂದರು. ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಜನಾರ್ದನ ಆಚಾರ್ಯ ಕುಕ್ಕಟ್ಟೆ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಮರೋಳಿ, ಕೃಷಿಕರಾದ ಪದ್ಮನಾಭ ರೈ ಎಂಜೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಸಮಿತಿ ಅಧ್ಯಕ್ಷ ಬಿ.ಕೆ.ಧನಂಜಯ ಆಚಾರ್ಯ ಏನೆಕಲ್ಲು ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಇಳಂತಿಲ ವಂದಿಸಿದರು. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಮಾ.೨೪ರಂದು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ಪೂಜೆ, ಹೋಮ, ರಕ್ಷೆಘ್ನ ಹೋಮ, ಬಿಂಬಾಧಿವಾಸ, ಮಾ.೨೫ರಂದು ನಾಗದೇವರ ಶಿಲಾಬಿಂಬ ಪ್ರತಿಷ್ಠೆ ಮತ್ತು ಪರಿವಾರ ಶಕ್ತಿಗಳ ಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಪೂಜೆ, ವಟು ಆರಾಧನೆ, ಕರ್ಮ ಸಮರ್ಪಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.