Breaking News

ಕರ್ನಾಟಕದ ಪ್ರಗತಿಗೆ ಜಾತಿ ರಾಜಕಾರಣದ್ದೇ ಅಡ್ಡಿ: ಡಾ| ಶಿಶಿಲ

Advt_Headding_Middle
Advt_Headding_Middle

“ಕರ್ನಾಟಕದ ಆರ್ಥಿಕತೆಯು ಪ್ರಾದೇಶಿಕ ಅಸಮತೋಲನ, ಪರಿಸರ ಅಸಮತೋಲನ, ನೆಲ-ಜಲ ವಿವಾದ ಮತ್ತು ರೈತರ ಸಮಸ್ಯೆಗಳ ತಲ್ಲಣದಿಂದಾಗಿ ನಿರೀಕ್ಷಿತ ಅಭಿವೃದ್ಧಿ ಹೊಂದುವಲ್ಲಿ ವೈಫಲ್ಯ ಕಂಡಿದೆ” ಎಂದು ಕರ್ನಾಟಕದ ಹಿರಿಯ ವಿದ್ವಾಂಸ ಡಾ| ಬಿ. ಪ್ರಭಾಕರ ಶಿಶಿಲ ಇಲ್ಲಿ ನುಡಿದರು. ಅವರು ಸ್ಥಳೀಯ ನೆಹರೂ ಮೆಮೋರಿಯಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಯೋಜನಾ ಆಯೋಗ ಸಂಯೋಜಿಸಿದ್ದ ಕರ್ನಾಟಕದ ಆರ್ಥಿಕತೆ ತಲ್ಲಣಗಳು ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡುತ್ತಿದ್ದರು.

“ಜಗತ್ತಿನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ಸರಕಾರ ೩೫ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರಿಂದ 15 ಲಕ್ಷ ಮರಗಳು ನಿರ್ನಾಮವಾಗಲಿವೆ. ಪ್ರಸ್ತಾವಿತ ಶಿಶಿಲ ಬೈರಾಪುರ ಹೆದ್ದಾರಿ ನಿರ್ಮಾಣ ಕಾರ್ಯ ರೂಪಕ್ಕೆ ಬಂದರೆ 2 ಲಕ್ಷ ಮರಗಳ ಮಾರಣ ಹೋಮ ಸಂಭವಿಸಲಿದೆ. ಇಂತಹ ಯೋಜನೆಗಳ ವಿರುದ್ಧ ಈಗಲೇ ಜಾಗೃತರಾಗದಿದ್ದರೆ ಕೊಡಗಿನಲ್ಲಾದ ಪ್ರಾಕೃತಿಕ ವಿಕೋಪದಂತೆ ಈ ಮಳೆಗಾಲದಲ್ಲಿ ದ.ಕ., ಉ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗಗಳಲ್ಲೂ ಪ್ರಾಕೃತಿಕ ವಿಕೋಪ ಸಂಭವಿಸಲಿದೆ. ಕರ್ನಾಟಕದ ರಾಜಕಾರಣ ಜಾತಿ ಆಧಾರಿತವಾಗಿರುವುದರಿಂದ ಪರಿಸರವಾದಿಗಳನ್ನು ಪ್ರಬಲ ಜಾತಿಗಳು ತೆಪ್ಪಗಾಗಿಸುತ್ತವೆ. ಜಾತಿ ರಾಜಕಾರಣವು ಶೋಷಿತ ವರ್ಗಗಳ ನಾಯಕತ್ವವನ್ನೇ ನಿರ್ನಾಮ ಮಾಡಿವೆ. ಇದರಿಂದಾಗಿ ಕರ್ನಾಟಕದ ಆರ್ಥಿಕತೆ ಹಿಂದುಳಿದಿದೆ” ಎಂದು ಅವರು ವಿಷಾದಿಸಿದರು.”
ಪ್ರಾಧ್ಯಾಪಕ ನಿರ್ದೇಶಕ ಪ್ರೊ. ವಿಷ್ಣು ಪ್ರಶಾಂತ್ ಕಾರ್ಯಕ್ರಮ ಸಂಯೋಜಿಸಿದರು. ಸಿಂಚನಾ ಸ್ವಾಗತಿಸಿ, ವಿನುತ್ ಕುಮಾರ್ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.