Breaking News

ಮಂಗಳೂರು ಲೋಕಸಬಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ರವರನ್ನು ಗೆಲ್ಲಿಸಲು ಕೆಪಿಸಿಸಿ ಟಿ ಎಂ ಶಹೀದ್ ಕರೆ

Advt_Headding_Middle
Advt_Headding_Middle

ಸುಳ್ಯದ ಪಿ ಅ ಮಹಮ್ಮದ್ ರವರ ಮನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಹೀದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಟಿ ಎಂ ಶಹೀದ್ ಮಾತನಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಯುವ ನಾಯಕ ಮಿಥುನ್ ರೈ ಯವರನ್ನು ಅತ್ಯಧಿಕ ಬಹು ಮತದಿಂದ ಆರಿಸಬೇಕಾಗಿ ಕರೆನೀಡಿದರು.ಕಾಂಗ್ರೇಸ್ ಪಕ್ಷವು ಶಾಂತಿ,ಸಹಬಾಳ್ವೆಯ ಪಕ್ಷವಾಗಿದ್ದು ಎಲ್ಲರಿಗೆ ಸಮಾನ ಅವಕಾಶವನ್ನು ನೀಡಿರುತ್ತದೆ.ಆದುದರಿಂದ ಅಲ್ಪಸಂಖ್ಯಾತರು ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕೆಂದರು.ಸಭೆಯಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷ ಜಯಪ್ರಕಶ್ ರೈ, ಪುತ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಹೇಮಾನಾಥ್ ಶೆಟ್ಟಿ , ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ,ರಾಜರಾಮ್ ಭಟ್, ಇಸಾಕ್ ಸಾಹೇಬ್,ಎಸ್ ಸಂಶುದ್ದೀನ್ , ಪಿ ಎ ಮಹಮ್ಮದ್ , ನಗರ ಪಂಚಾಯತ್ ಸದಸ್ಯ ಕೆ ಎಂ ಮುಸ್ತಾಫ, ಯುತ್ ಕಾಂಗ್ರೇಸ್ ಅಧ್ಯಕ್ಷ ಸಿದ್ದಿಕ್,ಮಹಮ್ಮದ್ ಕುಂಞ ಗೂನಡ್ಕ, ಜಿ ಕೆ ಹಮೀದ್, ಹಸೈನರ್ ಹಾಜಿ ಗೋರಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.