ಸಂಸದ ಕಟೀಲ್ ಸುಳ್ಯ ಪ್ರವಾಸ

Advt_Headding_Middle
Advt_Headding_Middle

 

ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಹಗೂ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಇಂದು ಚುನಾವಣಾ ಪ್ರಚಾರಕ್ಕಾಗಿ ಸುಳ್ಯ ಪ್ರವಾಸ ಕೈಗೊಂಡಿದ್ದಾರೆ ಬೆಳಿಗ್ಗೆ ಸುಳ್ಯಕ್ಕೆ ಆಗಮಿಸಿದ ಕಟೀಲ್‌ರವರು ಆಲೆಟ್ಟಿಗೆ ತೆರಳಿದರು. ಅಲ್ಲಿ ಬಾರ್ಪಣೆ ಯುವಕ ಮಂಡಲದ ವಠಾರದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಅಂಗಾರ, ಆಲೆಟ್ಟಿ ಪಂಚಾಯತ್ ಹರೀಶ್ , ಚುನಾವಣಾ ಸಂಚಾಲಕ ಹರಿಶ್ ಕಂಜಿಪಿಲಿ ಮೊದಲಾದವರಿದ್ದರು. ಸುಳ್ಯಕ್ಕೆ ಆಗಮಿಸುವ ಸಂಸದರು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಬಳಿಕ ಬಿಎಂಎಸ್ ಅಟೋ ಚಾಲಕರ ಜೊತೆ ಸಂವಾದದಲ್ಲಿ ಭಾಗವಹಿಸಿ ಕೆವಿಜಿ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡುವ ಅವರು ಆ ಬಳಿಕ ಮರ್ಕಂಜ , ನೆಲ್ಲೂರು ಕೆಮ್ರಾಜೆ, ಐವರ್ನಾಡು, ಅಜ್ಜಾವರ, ಜಾಲ್ಸೂರುಗಳಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.