Breaking News

ಬೆಳ್ಳಾರೆ ಜ್ಞಾನಗಂಗಾದಲ್ಲಿ ಬೇಸಿಗೆ ಶಿಬಿರಕ್ಕೆ ಸಾಲುಮರದ ತಿಮ್ಮಕ್ಕರಿಂದ ಚಾಲನೆ

Advt_Headding_Middle
Advt_Headding_Middle


ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಎ. 1ರಿಂದ 1೦ರ ತನಕ ನಡೆಯಲಿರುವ ಬೇಸಿಗೆ ಶಿಬಿರಕ್ಕೆ ಇಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು.

ಶಾಲೆಯ ಪಕ್ಕದ ಆಟದ ಬಯಲಿಗೆ ತೆರಳಿದ ಅವರು ಅದರ ಬದಿಯಲ್ಲಿ ಪುನರ್ಪುಳಿ ಮತ್ತು ಮಾವಿನ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆಗಾಗಿ ಮರಗಳನ್ನು ಕಡಿಯಬೇಡಿ, ಪ್ರತಿಯೊಬ್ಬರೂ ಒಂದೊಂದು ಮರಗಳನ್ನು ನೆಡಿ. ಮರಗಳು ಉಳಿದರೆ ಮಾತ್ರ ನಾಡು ಉಳಿಯುತ್ತದೆ ಎಂದು ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ರಂಗಾಯಣ ಕಲಾವಿದೆ ಶ್ರೀಮತಿ ಗೀತಾ ಮೋಂಟಡ್ಕ ಮಾತನಾಡಿ, ಸಾಲು ಮರದ ತಿಮ್ಮಕ್ಕರನ್ನು ಕರೆಸಿರುವುದು ಈ ವಿದ್ಯಾಸಂಸ್ಥೆಗೆ ಮತ್ತಷ್ಟು ಗರಿಮೆ ಮೂಡಿಸಿದಂತಾಗಿದೆ. ಪ್ರಕೃತಿ ಪ್ರೇಮವೂ ಬದುಕಿನಲ್ಲೂ ಖುಷಿ ನೀಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಮತ್ತು ಗೀತ ಮೋಂಟಡ್ಕರನ್ನು ಸನ್ಮಾನಿಸಲಾಯಿತು.
ಶಾಲಾ ಸಂಚಾಲಕ ಎಂ.ಪಿ.ಉಮೇಶ್ ಸ್ವಾಗತಿಸಿದರು. ಸಹಶಿಕ್ಷಕಿ ರೇಶ್ಮಾ ಪ್ರಸ್ತಾವನೆಗೈದರು. ಸಹಶಿಕ್ಷಕ ಪ್ರದೀಪ್ ಕಂಞಪ್ಪಾಡಿ ವಂದಿಸಿದರು. ಸಹಶಿಕ್ಷಕಿ ವಾರಿಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲೆ ದೇಚಮ್ಮ, ಆಡಳಿತ ಮಂಡಳಿಯ ಪುಟ್ಟಣ್ಣ ಗೌಡ, ಗಂಗಮ್ಮ, ಸಾಲುಮರದ ಟ್ರಸ್ಟ್‌ನ ಕಾರ್ಯದರ್ಶಿ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.