ಉಬರಡ್ಕದ ಭರ್ಜರಿಗುಂಡಿ ಟ್ಯಾಂಕಿಯಲ್ಲಿ ನೀರಿಲ್ಲ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಪಂಚಾಯತ್ ವ್ಯಾಪ್ತಿಯ ಭರ್ಜರಿಗುಂಡಿ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಟ್ಯಾಂಕಿಯಲ್ಲಿ ನೀರೇ ಇಲ್ಲ. ಟ್ಯಾಂಕಿಗೆ ನೀರು ಹತ್ತಿಸಿ, ಫಲಾನುಭವಿಗಳಿಗೆ ನೀಡುವಂತೆ ಆ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.
2015-16ರಲ್ಲಿ ಜಿ.ಪಂ. ಅನುದಾನದಿಂದ ಭರ್ಜರಿಗುಡ್ಡೆ ಎಂಬಲ್ಲಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಟ್ಯಾಂಕನ್ನು ನಿರ್ಮಿಸಲಾಗಿತ್ತು. ಟ್ಯಾಂಕಿ ಎತ್ತರದ ಪ್ರದೇಶದಲ್ಲಿದ್ದರೆ, ಅದಕ್ಕಾಗಿ ಬೋರ್ ಒಂದನ್ನು ರಸ್ತೆಯ ಬದಿಯಲ್ಲಿ ಕೊರೆಸಲಾಗಿದೆ. ಆದರೆ ಟ್ಯಾಂಕ್ ಆದಲ್ಲಿಂದ ಇದುವರೆಗೆ ಆ ಟ್ಯಾಂಕ್ ಗೆ ನೀರು ತುಂಬಿಸಿ, ಭರ್ಜರಿಗುಂಡಿಯ ೨೨ ಮನೆಗಳಿಗೆ ಕೊಡುವ ವ್ಯವಸ್ಥೆ ಆಗಿಲ್ಲ ಎನ್ನುವುದು ಈ ಭಾಗದವರ ಅಭಿಪ್ರಾಯ.
ಗ್ರಾಮ ಸಭೆಯಲ್ಲಿ ಪ್ರಸ್ತಾಪ
ಭರ್ಜರಿಗುಂಡಿಯಲ್ಲಿರುವ ಟ್ಯಾಂಕ್‌ಗೆ ನೀರು ಹತ್ತಿಸದಿರುವ ಪಂಚಾಯತ್ ಕ್ರಮವನ್ನು ಗ್ರಾಮ ಸಭೆಯಲ್ಲಿ ಆ ಭಾಗದ ಕೆಲವರು ಪ್ರಶ್ನಿಸಿದರೆಂದೂ, ಆ ವೇಳೆ ನೀರಿನ ಅಭಾವ ಎದುರಾದರೆ ಪಂಚಾಯತ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೆಮದೂ, ಆದರೆ ಈ ಬಾರಿಯ ಬೇಸಗೆ ವಿಪರೀತವಾಗಿದ್ದು ನೀರಿನ ಸಮಸ್ಯೆ ಎದುರಾದರೂ, ಪಂಚಾಯತ್‌ಗೆ ಸಮಸ್ಯೆಯ ಕುರಿತು ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ರಸ್ತೆ ಬದಿಯಲ್ಲಿರುವ ಬೋರ್‌ವೆಲ್ ನಿಂದ ಗುಡ್ಡದಲ್ಲಿರುವ ಟ್ಯಾಂಕ್‌ಗೆ ಪೈಪ್ ಕನೆಕ್ಷನ್ ಇದೆ. ಆದರೆ ಟ್ಯಾಂಕ್‌ನಿಂದ ಫಲಾನುಭವಿಗಳಿಗೆ ನೀರು ಕೊಡಲು ಹಾಕಲಾಗಿರುವ ಪೈಪ್ ಅಲ್ಲಲ್ಲಿ ತುಂಡಾಗಿದೆ. ಟ್ಯಾಂಕಿಯ ಸುತ್ತಮುತ್ತ ಕಾಡು ಬೆಳೆದು ಟ್ಯಾಂಕಿ ಕಾಣದಂತಾಗಿದೆ.
ನೀರಿಲ್ಲದ ಭಾಗಕ್ಕೆ ನೀರನ್ನು ಪಂಚಾಯತ್ ಒದಗಿಸಬೇಕಾಗುತ್ತದೆ. ಅದನ್ನು ಮಾಡುತ್ತೇವೆ. ಆದರೆ ಭರ್ಜರಿಗುಂಡಿಯಲ್ಲಿ ನೀರಿನ ಕೊರತೆ ಇದೆ ಎಂದು ಪಂಚಾಯತ್‌ಗೆ ಬಂದು ಯಾರೂ ಹೇಳಿಲ್ಲ. ನಮ್ಮ ಜತೆ ಹೇಳಿದರೆ ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ. ಆದರೂ ಈಗ ನಮಗೆ ಗೊತ್ತಾಗಿದೆ. ತಕ್ಷಣ ಅಲ್ಲಿಗೆ ಭೇಟಿ ನೀಡಿ, ಆ ವಾರ್ಡ್ ಸದಸ್ಯರ ಜತೆ ಚರ್ಚಿಸಿ ವ್ಯವಸ್ಥೆ ಕಲ್ಪಿಸುತ್ತೇವೆ. ಜನರಿಗೆ ತೊಂದರೆ ಯಾಗದಂತೆ ನೋಡಲಾಗುವುದು.
-ಹರಿಪ್ರಸಾದ್ ಪಾನತ್ತಿಲ ಅಧ್ಯಕ್ಷರು
ಗ್ರಾ.ಪಂ. ಉಬರಡ್ಕ ಮಿತ್ತೂರು

…………………
ಟ್ಯಾಂಕ್ ಮಾಡಿ ಕೆಲವು ವರ್ಷವಾಗಿದೆ. ಆದರೆ ಇದುವರೆಗೆ ನಮ್ಮ ಕಡೆಗೆ ನೀರು ಬಂದಿಲ್ಲ. ಪಂಚಾಯತ್‌ನಲ್ಲಿ ಕೇಳಿದರೆ ನಿಮಗೆ ಈಗ ನೀರಿನ ಸಮಸ್ಯೆ ಇಲ್ಲವಲ್ಲ. ಸಮಸ್ಯೆ ಬಂದಾಗ ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಈಗ ಬೇಸಗೆ ಆ ಭಾಗದಲ್ಲಿರುವ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಈಗಗಾಲದರೂ ಪಂಚಾಯತ್ ಎಚ್ಚೆತ್ತು ಟ್ಯಾಂಕಿಗೆ ನೀರು ಹತ್ತಿಸಿ, ಫಲಾನುಭವಿಗಳಿಗೆ ಕೊಡವ ವ್ಯವಸ್ಥೆ ಮಾಡಬೇಕು. ಟ್ಯಾಂಕಿಯ ಸುತ್ತ ಕಾಡು ಕಡಿದು, ಸ್ವಚ್ಛವಾಗಿಡುವಂತಾಗಬೇಕು. ಪಪೈ ಲೈನ್ ಗಳು ಕಟ್ಟಾಗಿದ್ದು, ಈ ಬಗ್ಗೆಯೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.
-ಗಂಗಾಧರ ಭರ್ಜರಿಗುಂಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.