ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಯಲ್ಲಿ ನಗರ ಪಂಚಾಯತ್ ವತಿಯಿಂದ ಸ್ವಚತೆ ಬಗ್ಗೆ ಮಾಹಿತಿ ಕಾರ್ಯಕ್ರಮ

Advt_Headding_Middle
Advt_Headding_Middle

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಯಲ್ಲಿ ನಗರ ಪಂಚಾಯತ್ ವತಿಯಿಂದ ಸ್ವಚತೆ ಬಗ್ಗೆ ಮಾಹಿತಿ ಕಾರ್ಯಕ್ರಮ ಎ.3 ರಂದು ನಡೆಯಿತು. ಕಾರ್ಯಕ್ರಮ ಕ್ಕೆ ಮೊದಲು ಸುಳ್ಯ ಶ್ರಿ ರಾಂ ಪೇಟೆಯಿಂದ ವಿದ್ಯಾಸಂಸ್ಥೆ ಯವರೆಗೆ ಸೈಂಟ್ ಜೋಸೆಫ್ ಮತ್ತು ಸೈಂಟ್ ಬ್ರಿಜಿದ್ ವಿದ್ಯಾಲಯದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸುಳ್ಯ ನಗರ ಸ್ವಚ ಗೊಳಿಸಿ ಕೊಂಡು ವಿದ್ಯಾಸಂಸ್ಥೆಯವರೆಗೆ ಜಾಗೃತಿ ಜಾಥದೊಂದಿಗೆ ಸ್ವಚ ಸುಳ್ಯ ಕಾರ್ಯಕ್ರಮ ನಡೆಯಿತು.

 

ಸ್ವಚ ಸುಳ್ಯ ಕಾರ್ಯಕ್ರಮ ಸುಳ್ಯ ನಗರ ಪಂಚಾಯತ್ ಆಡಳಿತಾಧಿಕಾರಿ ತಹಶಿಲ್ದಾರ್ ಕುಂಙಿ ಅಹಮ್ಮದ್ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಚತೆ ಬಗ್ಗೆ ಮಾಹಿತಿ ನೀಡಿದರು.

 

ನಗರ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ನಗರ ಪಂಚಾಯತ್ ಅರೋಗ್ಯ ಅಧಿಕಾರಿ ರವಿ ಕೃಷ್ಣ, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ವಿನೋದ್ ಲಸ್ರಾದೊ,ಎಂ.ಎಂ ಭಟ್,ಡಿ.ಎಸ್ ಗಿರೀಶ್ ದೆವರಗುಂಡ,ಮನಮೋಹನ್,ಸೈಂಟ್ ಜೊಸೆಫ್ ಮುಖ್ಯೋಪಾಧ್ಯಾಯಿನಿ ಬಿನೋಮ,ಸೈಂಟ್ ಬ್ರಿಜಿದ್ ಮುಖ್ಯೋಪಾಧ್ಯಾಯಿನಿ ಆ್ಯಂಟನಿಮೆರಿ,ನಗರ ಪಂಚಾಯತ್ ಸಿಬ್ಬಂದಿ ವರ್ಗದವರು ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.