ಸುಳ್ಯದಲ್ಲಿ ಖ್ಯಾತ ಚಿತ್ರನಟ ದಿ. ಟೈಗರ್ ಪ್ರಭಾಕರ್ ಜನ್ಮದಿನ ಸಂಭ್ರಮ ಪ್ರಯುಕ್ತ ಮಿಮಿಕ್ರಿ ಮತ್ತು ಅನ್ನದಾನ

Advt_Headding_Middle
Advt_Headding_Middle

ಸುಳ್ಯದ ಭಾವನಾ ಮೀಡಿಯಾ ಮತ್ತು ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ ಎಂ ಬಿ ಫೌಂಡೇಶನ್ ಹಾಗೂ ಸುಳ್ಳ್ಯದ ವಿಷ್ಣುವರ್ಧನ್ ಅಭಿಮಾನಿ ಸಂಘದ ಸಹಕಾರದಲ್ಲಿ ಖ್ಯಾತ ಚಿತ್ರನಟ ದಿ. ಟೈಗರ್ ಪ್ರಭಾಕರ್‌ರವರ ಜನ್ಮದಿನ ಸಂಭ್ರಮ ಪ್ರಯುಕ್ತ ಮಿಮಿಕ್ರಿ ಮತ್ತು ಅನ್ನದಾನ ಕಾರ್ಯಕ್ರಮವು ಸಾಂದೀಪ ವಿಶೇಷ ಶಾಲೆಯಲ್ಲಿ ಜರುಗಿತು.


ಭಾವನಾ ಮೀಡಿಯಾ ಸಂಚಾಲಕರಾದ ಜ್ಯೋತಿಷಿ , ಚಿತ್ರನಿರ್ದೇಶಕ ಎಚ್. ಭೀಮರಾವ್ ವಾಷ್ಠರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿ ” ಕನ್ನಡ ಚಿತ್ರರಂಗದ ಹುಲಿ ಎಂದೇ ಪ್ರಸಿದ್ಧರಾದ ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಸಹನಟನಾಗಿ, ಪೋಷಕ ನಟನಾಗಿ, ನಾಯಕನಟನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಹಂತ ಹಂತವಾಗಿ ಚಿತ್ರರಂಗದಲ್ಲಿ ಮೇಲೇರಿದ ಮಹಾನ್ ಕಲಾವಿದ. ೫೦೦ ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ಪ್ರಭಾಕರ್ ಪಂಚಭಾಷಾ ಚಿತ್ರನಟ. ಸಮಾಜಸೇವೆಯಲ್ಲಿ ತೊಡಗಿದ್ದ ನಟ ಹೃದಯವಂತರಾಗಿ ಕರುಣೆ ಉಳ್ಳವರಾಗಿದ್ದರು ” ಎಂದರು.
ಸಾಂದೀಪ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹರಿಣಿ ಸದಾಶಿವರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾದ ಜೂನಿಯರ್ ಪ್ರಭಾಕರ್ ( ಕುಂದಾಪುರ ನಾಗರಾಜ್ ) ರವರು ೧೪ ಕಲಾವಿದರ ಮಿಮಿಕ್ರಿ ಮಾಡಿ ಕೆಲವು ಚಿತ್ರಗೀತೆಗಳನ್ನು ಹಾಡಿ ಮನರಂಜಿಸಿದರು . ಮುಖ್ಯ ಅತಿಥಿಗಳಾಗಿ ಗುರುಸ್ವಾಮಿ ಬೀರಮಂಗಲ , ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಂಡಿತ್ ಹಾಗೂ ಪ್ರವೀಣ್ ಗಣೇಶ್ ರೇಡಿಯೋ ಸುಳ್ಳ್ಯ ಭಾಗವಹಿಸಿದ್ದರು . ವಿಷ್ಣುವರ್ಧನ್ ಸಂಘದ ಕಾರ್ಯದರ್ಶಿ ಜಬ್ಬಾರ್ ಉಪಸ್ಥಿತರಿದ್ದರು . ವಿಶೇಷ ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು . ವಿಶೇಷ ಶಿಕ್ಷಕಿ ವನಿತಾರವರು ಸ್ವಾಗತಿಸಿ, ವಿಶೇಷ ಶಿಕ್ಷಕಿ ಸೌಮ್ಯರವರು ವಂದನೆ ಸಲ್ಲಿಸಿದರು . ಸಭಾ ಕಾರ್ಯಕ್ರಮದ ಬಳಿಕ ಸರ್ವರಿಗೂ ಅನ್ನದಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.