ಜೇಸಿಐ ಪಂಜ ಪಂಚಶ್ರೀ ಬಹುಘಟಕದ ಭಾಷಣ ಕಲೆ ತರಬೇತಿ ಶಿಬಿರ ಮಿನಿಸ್ಪೀಚ್ ಕ್ರಾಪ್ಟ್ ಸ್ಪೀಕರ್-2019 

Advt_Headding_Middle
Advt_Headding_Middle

 

ಜೇಸಿಐ ಪಂಜ ಪಂಚಶ್ರೀಯ ಅತಿಥ್ಯದಲ್ಲಿ ಮಾ. ೩೧ ರಂದು ಬಹುಘಟಕದ ಭಾಷಣ ಕಲೆ ತರಬೇತಿ ಶಿಬಿರ ಮಿನಿಸ್ಪೀಚ್ ಕ್ರಾಪ್ಟ್ ಸ್ಪೀಕರ್-೨೦೧೯ ಕಾರ್ಯಕ್ರಮವು ಪೈದೊಂಡಿ ಸುಬ್ರಾಯ ಸ್ವಾಮಿ ಸಭಾಭವನ ಪಂಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಜೇಸಿಸ್‌ನ ವಲಯ ೧೫ರ ತರಬೇತಿ ವಿಭಾಗದ ನಿರ್ದೇಶಕಿ ಜೇಸಿಐ ಸೆನೆಟರ್ ಅಕ್ಷತಾ ಗೀರಿಶ್ ಇವರು ಉದ್ಘಾಟಿಸಿದರು.


ಮುಖ್ಯ ಅಥಿತಿಯಾದ ವಲಯ ಉಪಾಧ್ಯಕ್ಷ ಜೇಸಿ ರೋಯನ್ ಉದಯ್ ಕ್ರಾಸ್ತಾರವರು ಮಾತನಾಡಿ ಈ ಕಾರ್ಯಕ್ರಮದ ಬಗ್ಗೆ ಆಭಿನಂದನೆ ಸಲ್ಲಿಸಿದರು. ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶ್ರೀ ವಾಸುದೇವ ನಡ್ಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಜೇಸಿಐ ಪಂಜ ಪಂಚಶ್ರೀಯ ಘಟಕಧ್ಯಕ್ಷ ಜೇಸಿ ವಾಸುದೇವ ಮೇಲ್ಪಾಡಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸ್ಥಾಪಕಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ ಎಲ್ಲಾ ಅಥಿತಿಗಳಿಗೆ ಪುಪ್ಪಗುಚ್ಚ ನೀಡಿ ಗೌರವಿಸಿದರು. ರಾಷ್ಠಿಯ ತರಬೇತುದಾರರಾದ ಜೇಸಿ ಕೃಷ್ಣಮೂರ್ತಿ ಉಜಿರೆ ಪ್ರಧಾನ ತರಬೇತುದಾರರಾಗಿ ಹಾಗೂ ಸಹ ತರಬೇತುದಾರರಾಗಿ ವಲಯ ತರಬೇತುದಾರರಾದ ಜೇಸಿ ಸವಿತಾರ ಮುಡೂರು ಮತ್ತು ಜೇಸಿ ಸೋಮಶೇಖರ ನೇರಳ ತರಬೇತಿನಡೆಸಿಕೊಟ್ಟರು. ಕಾರ್ಯಕ್ರಮ ನಿರ್ದೇಶಕ ತೀರ್ಥಾನಂದ ಕೊಡೆಂಕಿರಿ ಪ್ರಾಸ್ತವನೆಗೈದರು. ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ ವಂದಿಸಿದರು. ಜೇಸಿ ಕೌಶಿಕ್ ಕುಳ ವೇದಿಕೆಗೆ ಆಹ್ವಾನಿಸಿದರು. ಜೇಸಿ ಜೀವನ್ ಮಲ್ಕಜೆ ಜೇಸಿ ವಾಣಿ ವಾಚಿಸಿದರು. ಜೇಸಿ ದುರ್ಗಾದಾಸ್ ಕಡ್ಲಾರ್, ಜೇಸಿ ಪುನೀತ್ ಚಿದ್ಗಲ್, ಜೇಸಿ ಪುನೀತ್ ಮೂಲೆಮನೆ, ಜೇಸಿ ಪ್ರಸನ್ನ ವೈ.ಟಿ., ಜೇಸಿ ವಾಚ್ಚಣ್ಣ ಕೆರೆಮೂಲೆ, ಜೇಸಿ ಸುಬ್ರಹ್ಮಣ್ಯ ಕಕ್ಯಾನ, ಗಣೇಶ್ ಬೀಮಗುಳಿ ಅಥಿತಿಗಳನ್ನು ಪರಿಚಯಿಸಿದರು. ಈ ತರಬೇತಿ ಶಿಬಿರದಲ್ಲಿ ಕುಂದಾಪುರ, ಪುತ್ತೂರು, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಸುಳ್ಯ ಪಯಸ್ವಿನಿ, ಬೆಳ್ಳಾರೆ, ನೆಕ್ಕಿಲಾಡಿ, ಕಡಬ, ಅಲಂಕಾರು, ಉಪ್ಪಿನಂಗಡಿ ಘಟಕದ ಒಟ್ಟು ೩೦ ಜನ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು.
ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪ್ರದಾನ ತರಬೇತುದಾರರು ಎಲ್ಲಾ ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಜೇಸಿ ಕೌಶಿಕ್ ಕುಳ ಜೇಸಿಐ ಪಂಜ ಪಂಚಶ್ರೀ , ಜೇಸಿ ಶೇಷಕುಮಾರ್ ಜೇಸಿಐ ಸುಬ್ರಹ್ಮಣ್ಯ ಹಾಗೂ ಜೇಸಿ ಕಾಶಿನಾಥ್ ಗೋಗಟೆ ಜೇಸಿಐ ಕಡಬದ ಸದಸ್ಯರುಗಳು out standing winner ಆಗಿ ಮೂಡಿಬಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.