ಎಲಿಮಲೆ ಸ.ಪ್ರೌಢಶಾಲೆಯಲ್ಲಿ ಕಲರವ ಬೇಸಿಗೆ ಶಿಬಿರಕ್ಕೆ ಚಾಲನೆ

Advt_Headding_Middle
Advt_Headding_Middle

 

ಮಕ್ಕಳ ಚೈತನ್ಯಗಳೂ ಪರೀಕ್ಷಿತ ವಿಷಯಗಳಾಗಲಿ : ನಾಯರ್‌ಕೆರೆ
ಸ.ಪ್ರೌಢಶಾಲೆ ಎಲಿಮಲೆ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಸ.ಪ್ರೌಢಶಾಲೆಯಲ್ಲಿ ಮಕ್ಕಳ ವಿಶೇಷ ಬೇಸಿಗೆ ಶಿಬಿರವು ಆರಂಭಗೊಂಡಿದೆ.


ಲೇಖಕ, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು. ಮಕ್ಕಳ ಜಗತ್ತು ಅನುಪಮ ಸ್ವರ್ಗ. ಅಲ್ಲಿ ಕೋಪ, ದ್ವೇಷಗಳಿಲ್ಲ. ಇಂತಹ ಸಹಜ ಮತ್ತು ಮುಗ್ಧ ಬಾಲ್ಯಕ್ಕೆ ಸಂಭ್ರಮ ಮತ್ತು ಸಂತೋಷ ನೀಡುವ ಕಾರ್ಯ ಬೇಸಿಗೆ ಶಿಬಿರಗಳಿಂದ ಆಗಬೇಕು ಎಂದವರು ಹೇಳಿದರು. ಮಕ್ಕಳಲ್ಲಿರುವ ಪಠ್ಯ ವಿಷಯದ ಬಗೆಗಿನ ಜ್ಞಾನ ಮಾತ್ರವಲ್ಲ, ಅವರಲ್ಲಿರುವ ಇತರ ಚೈತನ್ಯ ಮತ್ತು ಕೌಶಲ್ಯಗಳು ಕೂಡಾ ಪರೀಕ್ಷಿತ ವಿಷಯಗಳಾಗಬೇಕಾದ ಅಗತ್ಯವಿದೆ. ಮಕ್ಕಳಿಗೆ ಮಾತ್ರ ಗೊತ್ತಿರುವ, ಮಕ್ಕಳಿಂದ ಮಾತ್ರ ಸಾಧ್ಯವಾಗುವ ಕೌಶಲ್ಯ ಮತ್ತು ಆಸಕ್ತಿಗಳಿಗೆ ಪ್ರೋತ್ಸಾಹ ನೀಡಿದರೆ ಅಂತಹ ಮಧುರ ಬಾಲ್ಯವನ್ನು ಮಕ್ಕಳು ಬದುಕಿನಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸುವ ಛಲಕ್ಕೆ ಇದು ಅಡಿಪಾಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ರಂಗಕರ್ಮಿ ಕೃಷ್ಣಪ್ಪ ಬಂಬಿಲ ಮಾತನಾಡಿ, ಬೇಸಿಗೆ ಶಿಬಿರಗಳು ಮಾನವೀಯ ಸಂಬಂಧಗಳನ್ನು ವೃದ್ಧಿಸುತ್ತದೆ. ಮಕ್ಕಳಲ್ಲಿ ಅಡಗಿರುವ ಕಲೆಗಳನ್ನು ಉದ್ದೀಪಿಸುತ್ತದೆ ಎಂದು ಹೇಳಿದರು.
ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಕಜೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು ಪ್ರಸ್ತಾವನೆಗೈದರು. ಶಿಕ್ಷಕ ಸುಂದರ ಕೆ. ವಂದಿಸಿದರು. ಶಿಕ್ಷಕ ಮುರಳೀಧರ ಪುನ್ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುವಿಚಾರ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಗಿರಿಜಾ ಎಂ.ವಿ., ಶಾಲಾ ಎಸ್‌ಡಿಎಂಸಿ ಸದಸ್ಯರಾದ ಚಂದ್ರಶೇಖರ ಕೆ., ರುಖಿಯಾ ಬಿ., ಕಮಲಾ ಬಿ., ಸುರಕ್ಷಾ ಸಮಿತಿಯ ಸದಸ್ಯ ಭೋಜಪ್ಪ ಗೌಡ ಹರ‍್ಲಡ್ಕ, ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ, ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.