ಶಾಂತಿಮೂಲೆಯಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ : ತಹಶೀಲ್ದಾರ್ ಭೇಟಿ ಸಮಸ್ಯೆ ಇತ್ಯರ್ಥದ ಭರವಸೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕರಿಸುವ ಬ್ಯಾನರ್ ಅಳವಡಿಸಿದ್ದು ತಹಶೀಲ್ದಾರ್ ಬೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.

ಶಾಂತಿಮೂಲೆ ಪರಿಶಿಷ್ಟ ಪಂಗಡ ಕಾಲೊನಿ ನಿವಾಸಿಗಳು ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು,ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಮುಂದಿಟ್ಟಿದು ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದರು. ಈ‌‌ ನಿರ್ಧಾರ ಸುಳ್ಯ ತಹಶೀಲ್ದಾರರಿಗೆ ತಿಳಿದು ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಾಲೊನಿಯವರ ಸಮಸ್ಯೆ ಆಲಿಸಿ ಅವರಿಗೆ ಮೂಲಭೂತ ಸೌಕರ್ಯ ಒದಗಿದುವ ಭರವಸೆ ನೀಡಿ ಮತದಾನ ಮಾಡಲು ಮನವೊಲಿಸಿದರೆಂದು ತಿಳಿದು ಬಂದಿದೆ.

ಶಾಂತಿಮೂಲೆ ಕಾಲನಿಯಲ್ಲಿ ಸುಮಾರು 7 ಮನೆಗಳಿವೆ. ಮನೆಗಳಿಗೆ ಹೋಗಲು ರಸ್ತೆ ಇಲ್ಲ .ಕೆ.ಎಫ್.ಡಿ.ಸಿ ರಬ್ಬರ್ ತೋಟದಲ್ಲಿ ಮಾರ್ಗವಿದ್ದು ಅದನ್ನು ರಸ್ತೆ ಮಧ್ಯಕ್ಕೆ ಮರಗಳನ್ನು ನೆಟ್ಟು ರಸ್ತೆಯಲ್ಲಿ ವಾಹನ ಸಂಚರಿಸಲು ಆಗುವುದಿಲ್ಲ.

ಈ ಬಗ್ಗೆ ಹಲವು ಬಾರಿ ಕೆ.ಎಫ್.ಡಿ.ಸಿ ಯವರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಕುಡಿಯುವ ನೀರು ಕೂಡ ರಬ್ಬರ್ ತೋಟದ ಕಾಡಿನಿಂದ ಪೈಪು ಅಳವಡಿಸಿ ಮನೆಗೆ ತರುತ್ತಿದ್ದರು.ಇತ್ತೀಚೆಗೆ ಕೆಲವು ವರ್ಷ ಗಳಿಂದ ಅದಕ್ಕೂ ಕೆ.ಎಫ್.ಡಿ.ಸಿಯವರು ಪೈಪು ಹಾಕಿ ಅವರು ನೀರನ್ನು ಉಪಯೋಗ ಮಾಡಲು ಪ್ರಾರಂಭಮಾಡಿದರು ಇದರಿಂದ ನೀರಿನ ಹರಿವು ಕೂಡ ಕಡಿಮೆಯಾಗಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಸಂಪರ್ಕ ಕೆಲವು ಮನೆಗಳಿಗೆ ಇದ್ದು ಅದು ಕೂಡಾ ಸರಿಯಾಗಿಲ್ಲ. ಮರಗಳ ನಡುವೆ ವಿದ್ಯುತ್ ಲೈನ್ ಎಳೆದಿದ್ದು ಯಾವಾಗಲೂ ಮರದ ಗೆಲ್ಲುಗಳು ಬಿದ್ದು ವಯರ್ ತುಂಡಾಗುತ್ತಾ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಕಾಲನಿಯವರು ಪ್ರದಾನ ಮಂತ್ರಿಯವರಿಗೂ ಪತ್ರ ಬರೆದಿದ್ದು ಅದಕ್ಕೆ ಹಿಂಬರಹ ಬಂದಿರುತ್ತದೆ ಆದರೆ ಇಷ್ಟರವರೆಗೆ ಯಾವುದೇ ಪ್ರಯೋಜನ‌ ಆಗಲಿಲ್ಲ.

ಸುಳ್ಯ ಶಾಸಕರಿಗೆ ಗ್ರಾಮ ಪಂಚಾಯತ್ಗೆ ಹಲವು ಬಾರಿ ಭೇಟಿಯಾಗಿ ಮನವಿ ನೀಡಿದರೂ ಯಾರು ಕೂಡ ಸ್ಪಂದಿಸಲಿಲ್ಲ.

ಇದರಿಂದ ಬೇಸರಗೊಂಡ ಕಾಲೊನಿ‌ ನಿವಾಸಿಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.