ರೋಟರಿ ಪ್ರೌಢಶಾಲೆಯಲ್ಲಿ ಸರೋಜಿನಿ ಪಿ. ಯವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle


ರೋಟರಿ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ 35  ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಶ್ರೀಮತಿ ಸರೋಜಿನಿ ಪಿ. ಯವರಿಗೆ ರೋಟರಿ ಪ್ರೌಢಶಾಲೆಯಲ್ಲಿ ಎ.೩ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು. ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೋ. ಜಿತೇಂದ್ರ ಎನ್.ಎ. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಕೆ.ವಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಅಚ್ಚುತ ಅಟ್ಲೂರು, ಶ್ರೀಮತಿ ಸರೋಜಿನಿ ಪಿ. ಹಾಗೂ ಅವರ ಪತಿ ಚೆನ್ನಕೇಶವ, ಶಾಲಾ ಉಪನಾಯಕ ಕೌಶಿಕ್ ಎನ್.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀಯ ಸಂಸ್ಕೃತಿಯಂತೆ ಎಲ್ಲ ಶಿಕ್ಷಕಿಯರು ಅರಶಿನ, ಕುಂಕುಮ, ಹೂ, ಬಳೆ ತೊಡಿಸುವುದರ ಜೊತೆಗೆ ಸವಿನೆನಪಿನ ಕಾಣೀಕೆಯನ್ನಿತ್ತು ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಕೆ.ವಿ. ಸ್ವಾಗತಿಸಿದರು. ಶಿಕ್ಷಕಿ ಜಯಶ್ರಿ .ಕೆ. ಹಾಗೂ ವಿದ್ಯಾರ್ಥಿಗಳಾದ ಶ್ರವ್ಯ ಎ.ವಿ., ಹರ್ಷಿತ್, ಶಿಮಾ ರೈ, ಅಸಿಯಾ ಇಫಾ, ಕೌಶಿಕ್ ಎನ್. ಅಧಿಶ್ರೀ ಪಿ. ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶುಭದಾ ಆರ್. ಪ್ರಕಾಶ್ ಪ್ರಾರ್ಥಿಸಿದರು. ಶಿಕ್ಷಕಿ ಉಷಾ ಕೆ. ವಂದಿಸಿದರು, ಶಿಕ್ಷಕಿಯರಾದ ನಳಿನಾಕ್ಷಿ ಕಲ್ಮಡ್ಕ ಹಾಗೂ ಚಂದ್ರಕಲಾ ಕೆ.ಬಿ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.