Breaking News

ಸುಳ್ಯ ಎನ್‌ಎಂಸಿಯಲ್ಲಿ ಅಂತರ್ ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಸಮಾರೋಪ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ಅಂತರ್ ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ತರಬೇತಿ ಶಿಬಿರವು ಇತ್ತೀಚೆಗೆ ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಮಾತನಾಡಿ ಸಮಾಜದಲ್ಲಿ ಆಪತ್ತುಗಳು ಸಂಭವಿಸಿದಾಗ ಶಿಬಿರದಲ್ಲಿ ಕಲಿತಂತಹ ವಿಷಯವನ್ನು ಅಳವಡಿಸಿಕೊಳ್ಳಿ. ಆಗ ಇಂತಹ ಶಿಬಿರಗಳನ್ನು ಆಯೋಜಿಸಿದ್ದು ಸಾರ್ಥಕ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯದ ಪೋಲೀಸ್ ಉಪನಿರೀಕ್ಷಕರಾದ ಹರೀಶ್ ಎಂ ಆರ್ ಮಾತನಾಡಿ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಾನವೀಯತೆ ನೆಲೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ತನ್ನನ್ನು ತಾನು ರಕ್ಷಿಸಿಕೊಂಡು ಇನ್ನೊಬ್ಬರ ರಕ್ಷಣೆಗೆ ತೊಡಗಿಕೊಳ್ಳಲು ತರಬೇತಿ ಪಡೆಯುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಬಿಳಿನೆಲೆ ಮಾತನಾಡಿ ಸುಳ್ಯದಲ್ಲಿ ಇಂತಹ ಶಿಬಿರವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಜೀವನ ನಿರ್ವಹಣೆಗೆ ಅಗತ್ಯ ಮಾಹಿತಿಯನ್ನು ಒದಗಿಸಿದಂತಾಗಿದೆ ಎಂದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಶಿಬಿರ ಸಂಯೋಜಕರಾದ ಡಾ. ಅನುರಾಧಾ ಕುರುಂಜಿ ಶಿಬಿರಕ್ಕೆ ಸಹಕರಿಸಿದವರನ್ನು ನೆನಪಿಸಿಕೊಂಡರು. ಹಿರಿಯ ರೆಡ್ ಕ್ರಾಸ್ ಸದಸ್ಯರಾದ ಅಭಿಜಿತ್ ಟಿ ಎಲ್ ಹಾಗೂ ಶಶಾಂಕ್ ಫಡ್ಕೆ , ಘಟಕ ನಾಯಕರಾದ ನಳಿನಿ, ದೀಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಮಿತಾ, ತನ್ಮಯಿ, ತೃಪ್ತಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಅನ್ವಿತಾ ಸ್ವಾಗತಿಸಿ, ಶರಿತ್ರಾ ವಂದಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.