Breaking News

ಮಿಥುನ್ ರೈ ಗೆಲುವು ನಿಶ್ಚಿತ : ಟಿ.ಜಿ.ಸುನಿಲ್

Advt_Headding_Middle
Advt_Headding_Middle

ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರ ಗೆಲುವು ನಿಶ್ಚಿತವಾಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ನಿಂದ ಈ ಕ್ಷೇತ್ರದ ಸಂಚಾಲಕರಾಗಿ ನೇಮಕಗೊಂಡಿರುವ ಕೇರಳದ ಟಿ.ಜಿ.ಸುನಿಲ್ ಹೇಳಿದ್ದಾರೆ.


ಸುಳ್ಯದಲ್ಲಿ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಮೋದಿ ಸರ್ಕಾರವು ನೀಡಿದ ಯಾವ ಭರವಸೆಗಳನ್ನೂ ಈಡೇರಿಸದೆ, ಅಭಿವೃದ್ಧಿಯನ್ನೂ ಮಾಡದೆ ವಿಫಲವಾಗಿದೆ. ಕೇವಲ ಜಾತಿ, ಮತದ ಆಧಾರದಲ್ಲಿ ರಾಜಕಾರಣ ನಡೆಸುವ ಬಿಜೆಪಿಯನ್ನು ಜನ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಶಬರಿಮಲೆ ವಿಚಾರದಲ್ಲಿ ಸತ್ಯಸಂಧವಾದ ಹೋರಾಟ ನಡೆಸಿದ್ದು ಕಾಂಗ್ರೆಸ್. ಹೀಗಾಗಿ ಕೇರಳದಲ್ಲಿ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂದ ಅವರು ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧಿಸುತ್ತಿರುವದರಿಂದ ಈ ಬಾರಿ ಕೇರಳದಲ್ಲಿ ಚರಿತ್ರೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಾಫ, ಕೆ.ಗೋಕುಲ್‌ದಾಸ್, ಸಿದಿಕ್ ಕೊಕ್ಕೋ, ನಂದರಾಜ್ ಸಂಕೇಶ, ಕೆ.ಕೆ.ಹರಿಪ್ರಸಾದ್, ಲಕ್ಷ್ಮಣ ಶೆಣೈ, ಶಾಫಿ ಕುತ್ತಮೊಟ್ಟೆ, ಶರೀಫ್ ಕಂಠಿ, ನಝೀರ್ ಶಾಂತಿನಗರ, ಜೂಲಿಯಾನ ಕ್ರಾಸ್ತಾ, ಮಿಥುನ್ ಕರ್ಲಪ್ಪಾಡಿ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.