Breaking News

ಬಾಯಾರಿದವರಿಗೆ ನೀರಿನ ಆಸರೆ ನೀಡಿದ ಲಕ್ಷ್ಮಣ ದೇವಶ್ಯ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮದ ದೇವಶ್ಯದಲ್ಲಿ ಬಾಯಾರಿದವರಿಗೆ ನೀರು ನೀಡಿ ಸಮಾಜ ಮುಖಿ ಕಾರ್ಯ ಮಾಡಿರುವುದು ವರದಿಯಾಗಿದೆ.


ಗುತ್ತಿಗಾರಿನ ದೇವಶ್ಯದ ಲಕ್ಷ್ಮಣ ಎಂಬವರು ಸಾರ್ವಜನಿಕರ ಉಪಯೋಗಕ್ಕಾಗಿ ತಮ್ಮ ಮನೆಯ ಕುಡಿಯುವ ವ್ಯವಸ್ಥೆಯಿಂದಲೇ ಸಾರ್ವಜನಿಕರ ಉಪಯೋಗಕ್ಕಾಗಿ ನೀರು ಕೊಡುವ ವ್ಯವಸ್ಥೆ ಮಾಡಿದ್ದಾರೆ. ಗುತ್ತಿಗಾರು – ಕಮಿಲ – ಬಳ್ಪ ರಸ್ತೆಯ ದೇವಶ್ಯ ಬಳಿ ರಸ್ತೆ ಬದಿ ಸಾರ್ವಜನಿಕ ಉಪಯೋಗಕ್ಕಾಗಿ ತಮ್ಮ ಮನೆಯ ಕುಡಿಯುವ ನೀರಿನ ಪೈಪ್ ನಿಂದ ಸಂಪರ್ಕ ಕಲ್ಪಿಸಿ ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ವಾರದ ಹಿಂದೆ ಈ ಕಾರ್ಯ ಮಾಡಿದ್ದು ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಇದರ ಸದುಪಯೋಗ ವನ್ನು ಕೃತಜ್ಞತಾ ಭಾವದಿಂದ ಸ್ವೀಕರಿಸುತಿದ್ದಾರೆ. ಅಲ್ಲದೆ ಇಲ್ಲಿನ ಆಸುಪಾಸಿನಲ್ಲಿ ಕೆಲ ಮನೆಯವರು ಕೂಡ ದೈನಂದಿನ ವೆಚ್ಚದ ನೀರಿಗಾಗಿ ಇದರ ಉಪಯೋಗ ಮಾಡುತಿದ್ದಾರೆ. ಅಂತೂ ನೀರೆಲ್ಲಾ ಬತ್ತಿಹೋಗುತ್ತಿರುವ ಈ ಸಂಧರ್ಭ ಇಂತಹ ವ್ಯವಸ್ಥೆ ಇನ್ನಷ್ಟು ಜನರಿಂದ ಮೂಡಿಬಂದರೆ ಉತ್ತಮ.
ಈ ಬಗ್ಗೆ ಲಕ್ಷ್ಮಣ ಅವರನ್ನು ಮಾತನಾಡಿದಾಗ ಆಧುನಿಕ ಕಾಲ ಘಟ್ಟದಲ್ಲಿ ನೀರಿನ ಕೊರತೆಯಿದ್ದು ನೀರನ್ನು ಮಾರುವ ಕಾಲ ಬಂದೊದಗಿದೆ. ನಮ್ಮಲ್ಲಿ ಕುಡಿಯಲು ಉಪಯೋಗಿಸುವ ನೀರನ್ನೆ ಸಾರ್ವಜನಿಕರಿಗಾಗಿ ವ್ಯವಸ್ಥೆ ಗೊಳಿಸಲಾಗಿದೆ. ಹಲವು ಮನೆಗಳ ನೀರಿನ ಆಶ್ರಯ ಬಾವಿಯ ನೀರು ಬತ್ತಿಹೋಗುವ ಕಾಲವಿದು. ಇದರಲ್ಲಿ ನನ್ನ ದೊಡ್ಡತನವಿಲ್ಲ, ನನಗೆ ಅನಿಸಿರುವಂತೆ ಮಾಡಿದ್ದೇನೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.