ಎ.13ರಿಂದ ರಂಗಮನೆ ಚಿಣ್ಣರಮೇಳ

Advt_Headding_Middle
Advt_Headding_Middle

ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಎ.13 ರಂದು ಪೂ.9.30 ಕ್ಕೆ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರಮೇಳ 2019 ಉದ್ಘಾಟನೆಗೊಳ್ಳಲಿದೆ.

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಪುರೋಹಿತ ನಾಗರಾಜ್ ಭಟ್ ಇವರ ಅಧ್ಯಕ್ಷತೆಯಲ್ಲಿ, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಚಿಣ್ಣರಮೇಳವನ್ನು ಉದ್ಘಾಟಿಸಲಿದ್ದಾರೆ.
ಆರಾಧನಾ ಚಾರಿಟಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಅರುಣಾ ಭಟ್ ಮತ್ತು ನಿಮ್ಹಾನ್ಸ್ ಬೆಂಗಳೂರು ಇಲ್ಲಿನ ಮನೋ ಸಮಾಜಕಾರ್ಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ|ಶ್ರೀದೇವಿ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಸಾರಥ್ಯದಲ್ಲಿ ನಡೆಯುವ ಈ ಚಿಣ್ಣರಮೇಳದ ಸಂಪನ್ಮೂಲ ವ್ಯಕ್ತಿಗಳಾಗಿ ಸುನಂದ ನಿಂಬಾಳ್ಕರ್ ಧಾರವಾಡ,ನೀನಾಸಂ ರಾಜೇಶ್ವರಿ ಧಾರವಾಡ,
ಆಳ್ವಾಸ್ ನ ಭಾಸ್ಕರ ನೆಲ್ಯಾಡಿ,ರಂಗ ನಿರ್ದೇಶಕ ಶಿವಗಿರಿ ಕಲ್ಲಡ್ಕ,ಕೃಷ್ಣಪ್ಪ ಬಂಬಿಲ, ಶಿಲ್ಪಿ ವೇಣುಗೋಪಾಲ ಆಚಾರ್ಯ ಕುಂಬಳೆ,ಶಿವಕುಮಾರ್ ಉಜಿರೆ,ಉಪನ್ಯಾಸಕ ಡಾ| ಶ್ರೀಶಕುಮಾರ್ ಪುತ್ತೂರು, ಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ,ನವೀನ್ ಪೀಲಾರ್ ಮಂಗಳೂರು,ಪ್ರೇಮ್ ನಾಥ್ ಮರ್ಣೆ,ಪ್ರಸನ್ನ ಐವರ್ನಾಡು,ಶ್ರೀಹರಿ ಪೈಂದೋಡಿ,ಮಿಮಿಕ್ರಿ ಪಟು ಪಟ್ಟಾಭಿರಾಂ ಸುಳ್ಯ,ಗಾಯಕ ಮಯೂರ್ ಅಂಬೆಕಲ್ಲು,ಪ್ರತಿಭಾನ್ವಿತೆ ಪ್ರಿಯಾಂಶು ಕೆ.,ರಾಜ್ ಮುಖೇಶ್   ಮುಂತಾದವರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.