ಜ್ಞಾನಿಗಳನ್ನು ಪ್ರೋತ್ಸಾಹಿಸುವ ಅಗತ್ಯತೆ ನಮ್ಮ ಸಮಾಜದ ಮುಂದೆ ಇದೆ : ಮಾಧವ ಪೆರಾಜೆ

Advt_Headding_Middle
Advt_Headding_Middle

 

ಇವತ್ತಿನ ಆಧುನಿಕ ಸಮಾಜದಲ್ಲಿ ನಾವು ಕೇವಲ ನೋಡುಗರು ಮತ್ತು ಕೇಳುಗರು ಮಾತ್ರ ಆಗುತ್ತಿದ್ದಿವೆ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನಲಿರುವ ಪ್ರತಿಭೆಯನ್ನು ಸಮಾಜಕ್ಕೆ ಹಂಚುವ ಕೆಲಸ ಆಗಬೇಕಿದೆ. ಆದ್ದರಿಂದ ಜ್ಞಾನಿಗಳನ್ನು, ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ .ಈ ನಿಟ್ಟಿನಲ್ಲಿ ಇಂತ ಬೇಸಿಗೆ ಶಿಬಿರಗಳು ಸಹಾಯಕವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾದ್ಯಾಪಕರಾದ ಮಾದವ ಪೆರಾಜೆ ಹೇಳಿದರು.


ಅವರು ದಿ. ಕೇಶವ ಮಾಸ್ಟರ್ ಪೆರಾಜೆಯವರ ನೆನಪಿನಲ್ಲಿ ಪೆರಾಜೆಯಲ್ಲಿ ಸ್ಥಾಪಿತ ವಾದ “ಪಯಸ್ವಿನಿ ಬಳಗ ಪೆರಾಜೆ ,”ಇದರ ಪ್ರಥಮ ಕಾರ್ಯಕ್ರಮವಾಗಿ ಬೇಸಿಗೆ ಶಿಬಿರ ದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.
ಜ್ಯೋತಿ ಪ್ರೌಡ ಶಾಲೆಯಲ್ಲಿ ಬೇಸಿಗೆ ಶಿಬಿರ ಎ. ೩ರಂದು ಆರಂಭಗೊಂಡಿದ್ದು, ಶಾಲೆಯ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖೋಪಾಧ್ಯಯ ಪುರುಷೋತ್ತಮ ಕೀರ್ಲಾಯ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ರೂವಾರಿ ಪಯಸ್ವಿನಿ ಬಳಗದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಹಾಡು ಕುಣಿತ, ಕಸದಿಂದ ರಸ, ಮೋಜಿನ ಗಣಿತ, ಕ್ಲೇ ಮಾಡೆಲಿಂಗ್ ನಡೆಯಲಿದೆ.
ಎ. ೭ರಂದು ರಂದು ಹಾವು ನಾವು ಕಾರ್ಯಕ್ರಮ ಆಯೋಜನೆ ಗೊಂಡಿದ್ದು, ಎ. ೦೭/೦೪/೨೦೧೯ ರಂದು ಸಮಾರೋಪ ಸಮಾರಂಭ ನಡೆಯಲಿದೆ. ಪೆರಾಜೆ ಗ್ರಾಮ ಮಟ್ಟದ ಎಲ್ಲಾ ಶಾಲೆಗಳ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡ ಈ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ದಿ/ ಕೇಶವ ಮಾಸ್ಟರ್‌ರವರ ಕುಟುಂಬ ನಿರ್ವಹಿಸಿದರು.
.ಕಾರ್ಯಕ್ರಮದ ಉಸ್ತುವಾರಿಯನ್ನು ಸಂಘದ ಕಾರ್ಯದರ್ಶಿ ಶ್ರೀಮತಿ ರೇಖಾ ಅಡ್ಕದ ಮನೆ ವಹಿಸಿದ್ದು, ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಶಾಲಾ ಅಧ್ಯಾಪಕರು, ಪೋಷಕರು, ಗ್ರಾಮಸ್ತರು ಉಪಸ್ಥಿತರಿದ್ದರು. ನೆಹರೂ ಮೆಮೋರಿಯಲ್ ಕಾಲೇಜ್‌ನ ಉಪನ್ಯಾಸಕಿ ಶ್ರೀಮತಿ ಅನುರಾಧ ಕುರುಂಜಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಂಘದ ಸಂಚಾಲಕರಾದ ಸುಧಾಮ ಪೆರಾಜೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.