Breaking News

ಜನರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಲೋಕಸಭೆಯಲ್ಲಿ ಧ್ವನಿಯಾಗುವೆ : ಮಿಥುನ್ ರೈ

Advt_Headding_Middle
Advt_Headding_Middle

 


ಈ ಜಿಲ್ಲೆಯ ಕೃಷಿಕರೂ ಸೇರಿದಂತೆ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಲೋಕಸಭೆಯಲ್ಲಿ ಜನರ ಧ್ವನಿಯಾಗಲು ಮತದಾರರು ಅವಕಾಶ ಮಾಡಿಕೊಡಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ
ಸುಳ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಳ್ಪ ಗ್ರಾಮಕ್ಕೆ ನಾನು ಹೋದಾಗ ಕೆಲವು ಯುವಕರು ಮೋದಿ ಮೋದಿ ಎಂದು ಕೂಗುತ್ತಿದ್ದರು. ಆಗಲೇ ನನು ನನ್ನ ವಿಜಯವನ್ನು ಖಾತರಿಪಡಿಸಿಕೊಂಂಡೆ. ಸಂಸದರ ಆದರ್ಶಗ್ರಾಮದಲ್ಲೇ ಜನ ಸಂಸದರ ಹೆಸರನ್ನು ಹೇಳುವ ಬದಲು ಮೋದಿ ಹೆಸರು ಹೇಳುತ್ತಾರೆಂದರೆ ಅಲ್ಲಿ ಯಾವ ರೀತಿಯ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು. ನಾನು ಚುನಾವಣಾ ಸಂದರ್ಭದಲ್ಲಿ ಮಾತ್ರ ಕೇಸರಿ ಹಾಕಿಕೊಳ್ಳುವವನಲ್ಲ. ಹಿಂದುತ್ವ ಎಂದು ಕೆಲಸ ಮಾಡಿದವರಿಗೆ ಬಿಜೆಪಿ ಯಾವ ಸ್ಥಾನ ಕೊಟ್ಟಿದೆ ಎಂದು ಯುವಕರು ಅರ್ಥಮಾಡಿಕೊಳ್ಳಬೇಕು. ಹಿಂದುತ್ವ ಮನಸ್ಸಿನಲ್ಲಿರಬೇಕಾದುದೇ ಹೊರತು ಇದನ್ನು ರಾಜಕೀಯಕ್ಕಾಗಿ ಬಳಕೆಮಾಡಬಾರದು ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.