ದೂರವಾಣಿ ವಿನಿಮಯ ಕೇಂದ್ರಕ್ಕೆ ಡೀಸೆಲ್ ಕೊಟ್ಟು ಟವರ್ ಚಾಲನೆ ನೀಡಿ ನಿಧನ ಸುದ್ದಿ ತಿಳಿಸಬೇಕಾಯಿತು

Advt_Headding_Middle
Advt_Headding_Middle

ದೇಶವೇ ಆನ್ ಲೈನ್ , ಡಿಜಿಟಲ್ ಯುಗದೊಂದಿಗೆ ಓಡುತ್ತಿದೆ. ಆದರೆ ನಿಧನ ಸುದ್ದಿಯೊಂದನ್ನು ತಿಳಿಸಲು ದೂರವಾಣಿ ವಿನಿಮಯ ಕೇಂದ್ರ ಕ್ಕೆ ಡೀಸೆಲ್ ಕೊಟ್ಟು ಟವರ್‌ ಗೆ ಚಾಲನೆ ನೀಡಿ ನಿಧನ ವಾರ್ತೆ ತಿಳಿಸಬೇಕಾದ ಪ್ರಮೇಯ ಒದಗಿ ಬಂದ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ.
ಕಲ್ಮಕಾರು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತಿಂಗಳಿಂದ ಆರಂಭವಾಗಿ, ಇನ್ನೂ ಸರಿಯಾಗಿಲ್ಲ. ಅದಕ್ಕಾಗಿ ಮೊನ್ನೆ ಸುಳ್ಯ ತಹಶಿಲ್ದಾರರು ತಾಲೂಕು ಆಫೀಸ್ ನಲ್ಲಿ ನಡೆಸಿದ ಸಭೆಯಲ್ಲೂ ಏನಾದರೂ ವ್ಯವಸ್ಥೆ ಮಾಡಿ ನೆಟ್ವರ್ಕ್ ಒದಗಿಸುವಂತೆ ಕೂಗು ಕೇಳಿ ಬಂದಿತ್ತು.
ಎ.6 ರಂದು ಕಲ್ಮಕಾರು ಗ್ರಾಮದವರೊಬ್ಬರ ನಿಧನ ವಾರ್ತೆಯನ್ನು ಸಂಬಂಧಿಕರಿಗೆ ತಿಳಿಸಲೆಂದು ಫೋನ್  ಹಿಡಿದುಕೊಂಡರೆ ನೆಟ್‌ವರ್ಕ್ ಇರಲಿಲ್ಲ. ಏನು ಮಾಡುವುದು ಎಂದು ತಿಳಿಯದಾಗ ಅವರಿಗೆ ಹೊಳೆದದ್ದೆ ಈ ಮಾರ್ಗ. ಡೀಸೆಲ್ ನೀಡಿ ದೂರವಾಣಿ ವಿನಿಮಯ ಕೇಂದ್ರದ ಟವರ್‌ನ ಜನರೇಟರ್‌ಗೆ ಡೀಸೆಲ್ ಒದಗಿಸಿ ಜನರೇಟರ್ ಚಾಲನೆ ನೀಡಿ ನೆಟ್ವರ್ಕ್ ಬರಿಸುವುದು. ಅದರಂತೆ 5ಲೀ ಡೀಸೆಲ್ ನ್ನು ಕಲ್ಮಕಾರಿನ ಬಿ.ಎಸ್.ಎನ್.ಎಲ್ ವಿನಿಮಯ ಕೇಂದ್ರದ ಟವರ್‌ನವರಿಗೆ ನೀಡಿ ಜನರೇಟರ್‌ಗೆ ಚಾಲನೆ ನೀಡಲಾಯಿತು. ನೆಟ್ವರ್ಕ್ ಬಂದ ಮೇಲೆ ಬಂಧುಗಳಿಗೆ ಪೋನ್ ಮಾಡಿ ನಿಧನ ವಾರ್ತೆ ತಿಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.