Breaking News

ಬಾಳುಗೋಡು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಬಾಳುಗೋಡು ಪ್ರಥಮ ಸ್ಥಾನ

Advt_Headding_Middle
Advt_Headding_Middle

 

ವಿಶ್ವ ಯುವಕ ಮಂಡಲ ಬಾಳುಗೋಡು ಹಾಗೂ ದೀಪಾ ಮಹಿಳಾ ಮಂಡಲ ಬಾಳುಗೋಡು ಇದರ ಜಂಟಿ ಆಶ್ರಯದಲ್ಲಿ ಗುತ್ತಿಗಾರು ವಲಯ ಮಟ್ಟದ ಪುರುಷರ ವಾಲಿಬಾಲ್ , ಹಗ್ಗಜಗ್ಗಾಟ, ಮಹಿಳೆಯರ ತ್ರೋಬಾಲ್ ಮತ್ತು ಲಗೋರಿ ಪಂದ್ಯಾವಳಿ ಮಾ.೩೧ ರಂದು ಬೆಟ್ಟುಮಕ್ಕಿಯ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ಪನ್ನೆ ಶ್ರೀ ಉಳ್ಳಾಕುಲು ಮತ್ತು ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವಸ್ಥಾನದ ಅಧ್ಯಕ್ಷರಾದ ಜಯರಾಮ ಗೌಡ ಆಲ್ಕಬೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಸುಳ್ಯದ ನಿಯೋಜಿತ ಅಧ್ಯಕ್ಷ ಡಾ.ಪುರುಷೋತ್ತಮ ಕಟ್ಟೆಮನೆ, ವಿಶ್ವ ಯುವಕ ಮಂಡಲದ ಗೌರವ ಸಲಹೆಗಾರರಾದ ಡಾ. ಸೋಮಶೇಖರ್ ಕಟ್ಟೆಮನೆ, ಮಿತ್ರ ಕ್ರೀಡಾ ಕಲಾ ಸಂಘ ಪುಣೇರಿ ಇದರ ಅಧ್ಯಕ್ಷರಾದ ಜಗದೀಶ್ ಪುಣೇರಿ, ವಿಶ್ವ ಯುವಕ ಮಂಡಲದ ಮಾಜಿ ಅಧ್ಯಕ್ಷ ವಿಶ್ವನಾಥ ಕಿರಿಭಾಗ, ಭೂಸೇನೆ ನಿವೃತ್ತ ಯೋಧ ಧನಂಜಯ ಬಾಳುಗೋಡು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ರಾಧಾಕೃಷ್ಣ ಕಟ್ಟೆಮನೆ ಸ್ವಾಗತಿಸಿ, ಕಾರ್ಯದರ್ಶಿ ಉಲ್ಲಾಸ್  ಮುಚ್ಚಾರ ವಂದಿಸಿದರು.


ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಳುಗೋಡು ಒಕ್ಕೂಟದ ಅಧ್ಯಕ್ಷ ರಾದ ಬಿ.ಡಿ.ಲೋಕೇಶ್ ಭಾಗವಹಿಸಿದ್ದರು, ವಿಶ್ವ ಯುವಕ ಮಂಡಲದ ಮಾಜಿ ಅಧ್ಯಕ್ಷ ಶಿಶಿರ್ ಕಟ್ಟೆಮನೆ, ನಾಗರಿಕ ಹಿತರಕ್ಷ ಣಾ ಸಮಿತಿ ಅಧ್ಯಕ್ಷ ನಿತಿನ್ ಬಾಳುಗೋಡು, ಯುವಕ ಮಂಡಲದ ಉಪಾಧ್ಯಕ್ಷ ಅಧ್ಯಕ್ಷ ಜಯಂತ ಬಾಳುಗೋಡು, ಪ್ರಕಾಶ್ ಕಿರಿಭಾಗ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ವಿಶ್ವ ಯುವಕ ಮಂಡಲ ಬಾಳುಗೋಡು,ತ್ರೋಬಾಲ್ ಮತ್ತು ಲಗೋರಿ ಪಂದ್ಯಾವಳಿಯಲ್ಲಿ ದೀಪಾ ಮಹಿಳಾ ಮಂಡಲ ಬಾಳುಗೋಡು ಹಾಗೂ ಹಗ್ಗಜಗ್ಗಾಟದಲ್ಲಿ ಆದರ್ಶ ಯೂತ್ ಕ್ಲಬ್ ಹಾಲೆಮಜಲು ತಂಡಗಳು ಪ್ರಥಮ ಸ್ಥಾನ ಗಳಿಸಿದವು. ಪಂದ್ಯಾಟದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಕಿಶೋರ್ ಏನೆಕಲ್ಲು, ಮೋಹಿತ್ ಏನೆಕಲ್ಲು, ದೀಪಕ್ ನಂಬಿಯಾರ್, ಗದಾಧರ ಬಾಳುಗೋಡು ಮತ್ತು ದಿವ್ಯಾಕುಮಾರಿ ಗದಾಧರ ಬಾಳುಗೋಡು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೀಪಾ ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ ಪ್ರಕಾಶ್ ಸ್ವಾಗತಿಸಿ, ಡಾ. ಸೋಮಶೇಖರ್ ಕಟ್ಟೆಮನೆ ವಂದಿಸಿದರು. ಲೋಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.