ಸುಬ್ರಹ್ಮಣ್ಯ ಪರಿಸರದಲ್ಲಿ ಮಿಥುನ್ ರೈ ಪ್ರಚಾರ : ಹಲವು ಕಡೆ ದೇವಸ್ಥಾನ ಭೇಟಿ, ಕಾರ್ಯಕರ್ತರ ಸಭೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ಪರಿಸರದಲ್ಲಿ ಎ.೭ರಂದು ಮಂಗಳೂರು ಕಾಂಗ್ರೆಸ್ ಎಂಪಿ ಅಭ್ಯರ್ಥಿ ಪ್ರಚಾರ ನಡೆಸಿದ್ದಾರೆ ಹಾಗೂ ದೇವಸ್ಥಾನಗಳಿಗೆ ಭೇಟಿಯಿತ್ತು ಪೂಜೆ ನೆರವೇರಿಸಿದರು. ಹಲವು ಕಡೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಬಿಜೆಪಿ ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ವಿರೋಧಿ ಮೊದಲಾದ ಸಂದೇಶಗಳನ್ನು ಹರಡಿಸಿ ಅಪಪ್ರಚಾರ ನಡೆಸುತ್ತಿದೆ. ಒಳಗೊಳಗೆ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ಸೋಲಿನ ಭೀತಿಯಿಂದ ಈ ರೀತಿ ವರ್ತಿಸುತ್ತಿದೆ ಎಂದು ಮಂಗಳುರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು. ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ನೂಚಿಲದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.


ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಮಾತನಾಡಿ ಜಾತ್ಯಾತೀತ ಪರಂಪರೆಯುಳ್ಳ ಕಾಂಗ್ರೆಸ್-ಜೆಡಿಎಸ್ ಇನ್ನಿತರ ಪಕ್ಷಗಳು ಒಂದಾಗಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕಿದೆ. ಹಿಂದಿನ ಚುನಾವಣೆಯ ಫಲಿತಾಂಶದಲ್ಲಿ ಶೇ.69% ಮತ ಮೈತ್ರಿ ಪಕ್ಷಗಳಿಗೆ ಬಂದಿತ್ತು. ಮತಗಳು ಹಂಚಿ ಹೋದ ಕಾರಣ ಶೇ.31% ಮತಗಳನ್ನು ಪಡೆದ ಬಿಜೆಪಿ ಅಧಿಕಾರ ಹಿಡಿಯಿತು ಎಂದರು.
ಯೇನೆಕಲ್ಲು ಶ್ರೀ ಬಚ್ಚನಾಯಕ ದೈವಸ್ಥಾನ ಮತ್ತು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸುಬ್ರಹ್ಮಣ್ಯ ಆಗಮಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರ್ಶನ ಪಡೆದರು. ಬಳಿಕ ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಿದರು. ಬಳಿಕ ನಾಲ್ಕೂರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಗುತ್ತಿಗಾರಿನ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುಳ್ಯದ ಕಾರ್ಯಕ್ರಮಕ್ಕೆ ತೆರಳಿದರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ, ಪಿ.ಸಿ ಜಯರಾಮ, ಡಾ| ರಘು, ಅಶೋಕ್ ನೆಕ್ರಾಜೆ, ಶಿವರಾಮ ರೈ, ಕೃಷ್ಣಮೂರ್ತಿ ಭಟ್, ಸತೀಶ್ ಕೂಜುಗೋಡು, ಹರ್ಷಕುಮಾರ್ ದೇವಜನ, ವಿನೂಪ್ ಮಲ್ಲಾರ, ಜೆಡಿಎಸ್ ಮುಖಂಡರಾದ ಸಯ್ಯದ್ ಮೀರಾ ಸಾಹೇಬ್, ಎ.ಎ.ತಿಲಕ್, ವಿಮಲರಂಗಯ್ಯ, ಪೌಲ್ ಪಿರೇರಾ, ಬಾಲಕೃಷ್ಣ ಬಳ್ಳೇರಿ, ಹರೀಶ್ ಇಂಜಾಡಿ, ಪದ್ಮನಾಭ ಜಾಡಿಮನೆ, ಮಾಧವ ಡಿ, ಉದಯ ನೂಚಿಲ, ಕಿರಣ್ ಬುಡ್ಲೆಗುತ್ತು, ವಿಜೇಶ್ ಹಿರಿಯಡ್ಕ, ಪ್ರವೀಣ್ ಮುಂಡೋಡಿ, ಪರಶುರಾಮ ಚಿಲ್ತಡ್ಕ, ದಿವ್ಯಪ್ರಭಾ ಚಿಲ್ತಡ್ಕ, ಲಕ್ಷ್ಮಿ ಸುಬ್ರಹ್ಮಣ್ಯ, ಸುಲೋಚನಾ, ಭಾರತಿ, ಯಶೋಧಾ, ತೇಜಕುಮಾರ್ ಮುಂಡಕಜೆ, ಸನತ್ ಮುಳುಗಾಡು, ಮಾಧವ ಎರ್ದಡ್ಕ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.