ತೊಡಿಕಾನದ ಕಾಡುಪಂಜದಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ : ತಹಶೀಲ್ದಾರ್ ಭೇಟಿ, ಸಮಸ್ಯೆ ಇತ್ಯರ್ಥದ ಭರವಸೆ

Advt_Headding_Middle
Advt_Headding_Middle

 

ತೊಡಿಕಾನ ಗ್ರಾಮದ ಕಾಡುಪಂಜ ವ್ಯಾಪ್ತಿಯ ಜನರು ಎರುಕಡಪು ಎಂಬಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಕಳೆದ 35 ವರ್ಷಗಳಿಂದ ಬೇಡಿಕೆ ಇಡುತ್ತಾ ಬರುತ್ತಿದ್ದು, ಈ ಬಾರಿ ಚುನಾವಣಾ ಬಹಿಷ್ಕರಿಸುವ ಬ್ಯಾನರ್ ಅಳವಡಿಸಿದ್ದು, ತಹಶೀಲ್ದಾರ್ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ.

ಪ್ರತೀ ಬಾರಿಯೂ ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ನಿವಾಸಿಗಳು ಸೇತುವೆಗಾಗಿ ಬೇಡಿಕೆ ಇಡುತ್ತಿದ್ದರು. ಶಾಸಕರಾದಿಯಾಗಿ ಜನಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಭರವಸೆ ನೀಡುತ್ತಾರೆ ಹೊರತು ಬಳಿಕ ಆ ಕಡೆಗೆ ಹೋಗುವುದಿಲ್ಲ. ಭರವಸೆ ನೀಡಿದ್ದನ್ನು ಮತ್ತೆ ಕೇಳಿದರೆ ಅನುದಾನದ ಕೊರತೆ ಎಂಬ ಉತ್ತರ ಸಿಗುತಿತ್ತು.

ಕಾಡುಪಂಜದ ನಾಗರಿಕರು ಮಳೆಗಾಲ ಸಂದರ್ಭ ಸುಮಾರು 1೦ ಕಿ.ಮೀ ಸುತ್ತು ಬಳಸಿ ಚೆಂಬು, ಬಾಲಂಬಿಯಾಗಿ ತಮ್ಮ ಮನೆಗಳಿಗೆ ಹೋಗಬೇಕಾಗಿದ್ದು, ಶಾಲಾ ಮಕ್ಕಳು, ವೃದ್ಧರು ಸೇರಿದಂತೆ ಪ್ರತಿಯೊಬ್ಬರು ಕಷ್ಟ ಪಡಬೇಕಾದ ಸ್ಥಿತಿ ಇದೆ. ಈ ಬಾರಿಯಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಡಿಕೆಗೆ ಸ್ಪಂದಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಕಾಡುಪಂಜ ನಿವಾಸಿಗಳಾದ ಪ್ರಭಾಕರ, ವಾಸುದೇವ, ಕುಶಾಲಪ್ಪ, ಸೀತಾರಾಮ ಕಾಡುಪಂಜ, ಬೊಳಿಯಪ್ಪ, ಮನೋಜ್ ಕುಮಾರ್, ನಾಗೇಶ್ ಕಾಡುಪಂಜ ತಿಳಿಸಿದ್ದರು. 

ಈ ನಿರ್ಧಾರದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಓದಿದ ಸುಳ್ಯ ತಹಶೀಲ್ದಾರ್ ಕುಂಞಿ ಅಹ್ಮದ್‌ರವರು ಎ. ೯ರಂದು ಅಪರಾಹ್ನ ಪಿಡಬ್ಲ್ಯೂಡಿ ಇಂಜಿನಿಯರ್ ಸಾಯಿಸಂದೇಶ್ ಹಾಗೂ ಜಿ.ಪಂ. ಇಂಜಿನಿಯರ್ ಮಣಿಕಂಠರವರ ಜೊತೆಗೆ ಎರುಕಡಪು ಮೂಲಕ ಕಾಡುಪಂಜಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಾಗೇಶ್ ಕಾಡುಪಂಜ, ಸೀತಾರಾಮ ಕಾಡುಪಂಜ, ಬೊಳಿಯಪ್ಪ ಕಾಡುಪಂಜ ಮೊದಲಾದ ಹತ್ತಾರು ಮಂದಿ ನದಿಯ ಬದಿಯಲ್ಲಿ ಸೇರಿ ತಹಶೀಲ್ದಾರರಿಗೆ ತಮ್ಮ ಸಂಕಷ್ಟವನ್ನು ವಿವರಿಸಿದರು. ಇಂಜಿನಿಯರ್‌ಗಳೊಂದಿಗೆ ಸಮಾಲೋಚಿಸಿದ ತಹಶೀಲ್ದಾರ್‌ರವರು, ” ಇಲ್ಲಿ ಸೇತುವೆ ಅವಶ್ಯಕತೆ ಕುರಿತು ಇಲಾಖೆಯ ಮೂಲಕ ವರದಿ ಸಿದ್ದಗೊಳಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಶಾಸಕರ ಮಟ್ಟದಲ್ಲಿ ಮತ್ತು ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಅದನ್ನು ಮಂಜೂರು ಮಾಡಿಸಿಕೊಳ್ಳುವ ಜವಾಬ್ದಾರಿ ನಿಮ್ಮದು ” ಎಂದು ಊರವರಿಗೆ ಹೇಳಿದರು. ಊರವರು ಅದನ್ನು ಒಪ್ಪಿದರು. ಆ ಬಳಿಕ ತಹಶೀಲ್ದಾರರು, ಊರವರು ಚುನಾವಣಾ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವಂತೆಯೂ, ಪ್ರಜಾಪ್ರಭುತ್ವ ಪ್ರಮುಖ ಹಕ್ಕಾದ ಮತದಾನದ ಹಕ್ಕನ್ನು ಚಲಾಯಿಸುವಂತೆಯೂ ವಿನಂತಿಸಿಕೊಂಡರು. ” ನಿಮ್ಮ ಭರವಸೆಯನ್ನು ಪ್ಪಿ ನಾವು ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುತ್ತೇವೆ. ಆ ಬಳಿಕವೂ ನಮ್ಮ ಬೇಡಿಕೆ ಈಡೇರದಿದ್ದರೆ ನಾವು ಮಕ್ಕಳು ಮರಿಗಳೊಂದಿಗೆ ನಿಮ್ಮ ಕಚೇರಿಯ ಮುಂಭಾಗದಲ್ಲಿ ಬಂದು ಕುಳಿತುಕೊಳ್ಳುತ್ತೇವೆ” ಎಂದು ಹೇಳಿದರು. ತಹಶೀಲ್ದಾರರು ಅದಕ್ಕೆ ಸಮ್ಮತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.