ಹರಿಹರ ಪಳ್ಳತ್ತಡ್ಕ : ದೃಢಕಲಶಾಭಿಷೇಕ ಹಾಗೂ ಶತರುದ್ರಾಭಿಷೇಕ

Advt_Headding_Middle
Advt_Headding_Middle

ಇತಿಹಾಸ ಪ್ರಸಿದ್ಧ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ದೃಢಕಲಶಾಭಿಷೇಕ ಹಾಗೂ ಶತರುದ್ರಾಭಿಷೇಕ ನಡೆಯಿತು.

ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈಧಿಕ ಕಾರ‍್ಯಕ್ರಮಗಳು ನಡೆಯಿತು, ಬೆಳಗ್ಗೆ ಗಣಹೋಮ ನರವೇರಿದ ಬಳಿಕ ಶ್ರೀ ದೇವರಿಗೆ ದ್ರಢಕಲಶಾಭಿಷೇಕ ನಡೆದು ಸಹಸ್ರ ನಾರ್ಮಾರ್ಚನೆ ನಡೆಯಿತು. 

ಬಳಿಕ ಶತರುದ್ರಾಭಿಷೇಕ ನೆರವೇರಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದ್ರಢಕಲಶಾಭಿಷೇಕ ಮತ್ತು ಶತರುದ್ರಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರುಕುಮಾರ್ ಕೂಜುಗೋಡು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು,  ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ, ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್, ಸಹಾಯಕ ಅರ್ಚಕ ಕೃಷ್ಣಕುಮಾರ್ ಬಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ  ದಿವಾಕರ ಮುಂಡಾಜೆ, ಶ್ರೀಧರ ಭಾಗವತ್, ಉಷಾಪ್ರಭಾಕರ ಕಿರಿಭಾಗ, ಶೈಲೇಶ್ ಕಟ್ಟೆಮನೆ, ನಿತಿನ್‌ಕುಮಾರ್ ಬಾಳುಗೋಡು, ಶೋಭಾಮಣಿ ಕೋಡಿಯಡ್ಕ, ವಿವಿಧ ಉಪ ಸಮಿತಿಗಳ ಪ್ರಮುಖರು, ಸದಸ್ಯರು, ಕೂಡುಗಟ್ಟಿನ ಹಾಗೂ ಊರಪರವೂರ ಭಕ್ತರು ಉಪಸ್ಥಿತರಿದ್ದರು.
ಸೋಮವಾರ ಸಂಜೆ ಭಜನಾ ತಂಡಗಳಿಂದ ಕೀರ್ತನೆ ನಡೆದ ಬಳಿಕ ಉಪ್ಪಿನಂಗಡಿ ಇಂಚರ ಮ್ಯೂಸಿಕಲ್ಸ್ ತಂಡದವರಿಂದ ಭಕ್ತಿ-ಭಾವ-ಗಾಯನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.