ಕಲ್ಮಕಾರು ಶೆಟ್ಟಿಕಟ್ಟ ಸೇತುವೆಗಾಗಿ ಮತದಾನ ಬಹಿಷ್ಕಾರಕ್ಕೆ ಮುಂದಾದ ಊರವರು

Advt_Headding_Middle
Advt_Headding_Middle

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಕಲ್ಮಕಾರು ಗ್ರಾಮದ ಕಾಜಿಮಡ್ಕ,ಮೆಂಟೆಕಜೆ, ಕೊಪ್ಪಡ್ಕ, ಅಂಜನಕಜೆ, ಗುಳಿಕಾನ ಭಾಗದ ಸುಮಾರು 40 ಮನೆಯವರು ಸೇತುವೆಗಾಗಿ ಮತದಾನ ಬಹಿಷ್ಕಾರ ಹಾಕಲು ಮುಂದಾದ ಘಟನೆ ವರದಿಯಾಗಿದೆ.

ಶೆಟ್ಟಿಕಟ್ಟ ಇದು ಕಲ್ಮಕಾರಿನ ಶಕ್ತಿನಗರ ಬಳಿ ಇರುವ ಶೆಟ್ಟಿಕಟ್ಟ – ಗುಳಿಕಾನ ಸಂಪರ್ಕಕ್ಕೆ ನದಿಗೆ ಸಾಂಪ್ರದಾಯಿಕವಾಗಿ ಕಟ್ಟುವ ಬಿದಿರಿನ ಕಟ್ಟ. ಕಾಜಿಮಡ್ಕ, ಕೊಪ್ಪಡ್ಕ, ಅಂಜನಕಜೆ, ಗುಳಿಕಾನ, ಮೆಂಟೆಕಜೆ ಭಾಗದ ಹೆಚ್ಚಿನ ಮನೆಯವರಿಗೆ ಕಲ್ಮಕಾರಿಗಾಗಿ ಪೇಟೆಗೆ ಮಳೆಗಾಲ ಬರಬೇಕಾದರೆ ಬಿದಿರಿನ ಶೆಟ್ಟಿಕಟ್ಟ ಅನಿವಾರ್ಯ. ಇಲ್ಲೊಂದು ಶಾಶ್ವತವಾದ ಸೇತುವೆ ನಿರ್ಮಾಣವಾಗ ಬೇಕು ಎಂದು ಈ ಭಾಗದ ಜನ ಮನವಿ ಅರ್ಪಿಸದ ಜನಪ್ರತಿನಿಧಿ ಇಲಾಖೆಗಳಲ್ಲಿ. ಶಾಸಕರು, ಎಂ.ಪಿ, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಯವರಿಗೆ ನಿಯೋಗವೇ ತೆರಳಿ ಸೇತುವೆ ನಿರ್ಮಾಣ ಮಾಡುವಂತೆ ಕೇಳಿಕೊಂಡಿತ್ತು.

ಈ ಭಾಗದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕೃಷಿಕರು ಮಳೆಗಾಲ ಕಲ್ಮಕಾರಿಗೆ ಅಥವಾ ಪೇಟೆಗೆ ತೆರಳಲು ಪಡುವ ಕಷ್ಟದ ಬಗ್ಗೆ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು. ಆದರೆ ಇದ್ಯಾವುದು ಈ ಭಾಗದ ಜನರಿಗೆ ಫಲಕಾರಿಯಾಗಿರಲಿಲ್ಲ.
ಇದಕ್ಕೆ ಬೇಸತ್ತು ಈ ಭಾಗದ ಸುಮಾರು 40 ಮನೆಯವರು ಮುಂದಿನ ದಿನಗಳಲ್ಲಿ ನಡೆಯುವ ಲೋಕ ಚುನಾವಣೆಯನ್ನು ಮತದಾನದ ಮಾಡದೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮೀಟಿಂಗ್ ನಡೆಸಲಾಗಿದ್ದು ಪ್ರತಿ ಭಟನಾರ್ಥವಾಗಿ ಬ್ಯಾನರ್ ಅಳವಡಿಸಿಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.