ಪೆರಾಜೆಯಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಸುಳ್ಯ:ಪೆರಾಜೆ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ ವತಿಯಿಂದ ಪೆರಾಜೆ ಜಾತ್ರೋತ್ಸವ ಪ್ರಯುಕ್ತ  28ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಶ್ರೀ ಶಾಸ್ತಾವು ದೇವಸ್ಥಾನದ ಮುಂಭಾಗದ ಕಾವೇರಿ ಗದ್ದೆಯಲ್ಲಿ ನಡೆಯಿತು.
ಪಂದ್ಯಾಟದಲ್ಲಿ 24ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮನುಪೆರುಮುಂಡ ಮತ್ತು ಸುರೇಶ್ ಪೆರುಮುಂಡ ಪ್ರಾಯೋಜಕತ್ವದ ನಮ್ಮ ಪೆರಾಜೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಪಂದ್ಯಾಟವನ್ನು ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಸನ್ನ ನೆಕ್ಕಿಲ ವಹಿಸಿದರು. ಅತಿಥಿಗಳಾಗಿ ಶಾಸ್ತಾವು ದೇವಸ್ಥಾನದ ದೇವತಕ್ಕ ರಾಜಗೋಪಾಲ, ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಉದ್ಯಮಿ ವಿಜಯಕುಮಾರ್ ನಿಡ್ಯಮಲೆ, ಸಂತೋಷ್ ಕುಮಾರ್ ರೈ, ರತ್ನಾಕರ ಕುಂದಲ್ಪಾಡಿ, ಎನ್.ಗಣೇಶ್ ಭಟ್ ಭಾಗವಹಿಸದರು. ಸಂಘದ ಸ್ಥಾಪಕಾಧ್ಯಕ್ಷ ದೊಡ್ಡಣ್ಣ ಬರೆಮೇಲು ವೇದಿಕೆಯಲ್ಲಿ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.