Breaking News

ಸುಳ್ಯ ಜೂನಿಯರ್ ಕಾಲೇಜು ರಸ್ತೆಯಲ್ಲಿ ಕಸ ವಿಲೇವಾರಿ ಜನಜಾಗೃತಿ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ನಮ್ಮ ಮನೆಯ ಮತ್ತು ಪರಿಸರದ ತ್ಯಾಜ್ಯದ ಸಮರ್ಪಕ ವಿಲೇವಾರಿಗಾಗಿ ಜನಜಾಗೃತಿ ಕಾರ್ಯಕ್ರಮ ಇಂದು ಬೆಳಿಗ್ಗೆ ಸರಕಾರಿ ಜೂನಿಯರ್ ಕಾಲೇಜು ಬಳಿಯಿಂದ ಜ್ಯೋತಿ ಸರ್ಕಲ್ ವರೆಗೆ ನಡೆಯಿತು.


ಸುಳ್ಯ ಮಹಿಳಾ ಸಮಾಜ, ಲಯನ್ಸ್ ಕ್ಲಬ್, ರೋಟರಿ ಸದಸ್ಯರು, ವರ್ತಕರ ಸಂಘ, ಪ್ರೆಸ್ ಕ್ಲಬ್, ಪಯಸ್ವಿನಿ ಯುವತಿ ಮಂಡಲ ಮೊದಲಾದ ಸಂಘ ಸಂಸ್ಥೆಗಳು ಸ್ಥಳೀಯರೊಂದಿಗೆ ಸೇರಿಕೊಂಡು ಈ ಕಾರ್ಯಕ್ರಮ ನಡೆಸಿದ್ದರು. ಮನಮೋಹನ ಕುರುಂಜಿಯವರು ತಂಡವನ್ನು ಮುನ್ನಡೆಸಿದರು. ನ.ಪಂ. ಮುಖ್ಯಾಧಿಕಾರಿ ಶ್ರೀಧರ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಜೂ.ಕಾಲೇಜು ದೈಹಿಕ ಶಿಕ್ಷಕ ನಟರಾಜ್, ಹೋಗಾರ್ಡ್ ರಾಮಕೃಷ್ಣ, ರೊ. ಎ.ಎಂ. ಭಟ್, ವಿನೋದ್ ಲಸ್ರಾದೋ, ಡಾ.ಶ್ರೀಕೃಷ್ಣ ಭಟ್, ಹಸನ್ ಹಾಜಿ, ಹರೀಶ್ ರೈ, ದಿನೇಶ್, ದಾಮೋದರ ಶ್ರೀಕಟೀಲ್, ರಮೇಶ್ ಭಟ್, ವಿನೋದಿನಿ ರೈ, ಕೃಷ್ಣ ನಾವಡ, ಅಲ್ಲದೆ ವಿದ್ಯಾರ್ಥಿಗಳು, ಸ್ಥಳೀಯ ಮಹಿಳೆಯರು ಭಾಗವಹಿಸಿದ್ದರು.


ಶ್ರೀ ರಾಂಪೇಟೆಯ ಸರಕಾರಿ ಆಸ್ಪತ್ರೆಯ ಎದುರಿನ ರಿಕ್ಷಾ ಸ್ಟ್ಯಾಂಡ್‌ನಿಂದ ಸ್ವಚ್ಛತಾ ಅಭಿಯಾನ ಆರಂಭಗೊಂಡಿದ್ದು, ರಿಕ್ಷಾ ಚಾಲಕ ಮಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.