Breaking News

ಸುಬ್ರಹ್ಮಣ್ಯ: ರವಿ ಕಕ್ಕೆಪದವುರವರಿಂದ ಬಡ ಕುಟುಂಬಕ್ಕೆ ಉಚಿತ ನಿವೇಶನ ಹಸ್ತಾಂತರ

Advt_Headding_Middle
Advt_Headding_Middle

 

ಜೇಸೀ ವಲಯಾಧಿಕಾರಿ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಇದರ ಪೂರ್ವಾಧ್ಯಕ್ಷ, ಕೊಡುಗೈ ದಾನಿ ರವಿಕಕ್ಕೆಪದವುರವರು ಕುಲ್ಕುಂದದಲ್ಲಿ ವರ್ಷಂಪ್ರತಿ ನೀಡುತ್ತಾ ಬರುತ್ತಿರುವ ಉಚಿತ ಮನೆ ನಿವೇಶನವನ್ನು ಕೂಲಿ ಕೆಲಸಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡ ದಂಪತಿಗಳಾದ ಪುರುಷೋತ್ತಮ ಮತ್ತು ಶ್ರೀಮತಿ ಚಿತ್ರರವರಿಗೆ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಅನೀಶ್ ಮ್ಯಾಥ್ಯೂ ಹಸ್ತಾಂತರಿಸಿದರು.

ಇದರೊಂದಿಗೆ ಅರಣ್ಯ ರಕ್ಷಕರಾಗಿ ಸುಮಾರು 3೦ ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಪತ್ನಿ ಶ್ರೀಮತಿ ಮೀನಾಕ್ಷಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದ ಅಶೋಕ್ ಕುಟುಂಬಕ್ಕೂ ಉಚಿತ ನಿವೇಶನವನ್ನು ನೀಡಿರುತ್ತಾರೆ. ಶಾಲಾ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿಗಳು, ಸಮವಸ್ತ್ರಗಳು, ಬಡವರಿಗೆ ಅಕ್ಕಿದಾನ, ಅಶಕ್ತಿಗೆ ಸುಶ್ರೂಷೆ, ಆರ್ಥಿಕ ನೆರವು ಸೇರಿದಂತೆ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ರವಿಕಕ್ಕೆಪದವುರವರು ಸುಮಾರು ೧೨ ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಜಾಗ ಖರೀದಿಸಿ ಅದನ್ನು ನಿವೇಶನಗಳನ್ನಾಗಿ ಮಾಡಿ ಈಗಾಗಲೇ ಉಚಿತ ನಿವೇಶನದೊಂದಿಗೆ ೭ ಮಂದಿ ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರಲ್ಲದೆ ೪ ನಿವೇಶನಗಳನ್ನು ನೀಡಿರುತ್ತಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಲ್ನುಡಿಯಂತೆ ತನ್ನ ಸಂಪಾದನೆಯ ಸ್ವಲ್ಪವನ್ನು ಸಮಾಜದ, ಬಡ ಜನರ ಸೇವೆಗಾಗಿ ಮೀಸಲಿಟ್ಟಿರುವ ರವಿ ಕಕ್ಕೆಪದವುರವರು ತಮ್ಮ ಸೇವೆಗಾಗಿ ನೂರಾರು ಸನ್ಮಾನಗಳನ್ನು, ಹತ್ತಾರು ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ನೀವೇಶನ ಹಸ್ತಾಂತರ ಸಂದರ್ಭದಲ್ಲಿ ಜೇಸಿಐ ಭಾರತದ ನಿಕಟಪೂರ್ವಾ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ ನಾಯರ್, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಅಧ್ಯಕ್ಷ ಶೇಷಕುಮಾರ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಮೋನಪ್ಪ ಡಿ, ವಲಯಾಧ್ಯಕ್ಷ ಅಶೋಕ್ ಚೂಂತಾರು, ವಲಯ ಉಪಾಧ್ಯಕ್ಷ ಜಯೇಶ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ನಿರ್ದೇಶಕ ಗೋಪಾಲ್ ಎಣ್ಣೆಮಜಲು, ಸುಬ್ರಹ್ಮಣ್ಯ ಗ್ರಾ.ಪಂ. ಪಿ.ಡಿ.ಓ. ಮುತ್ತಪ್ಪ ಸೇರಿದಂತೆ ಜೇಸಿ ಸದಸ್ಯರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.