ಪಿ.ಜಿ.ಎಸ್.ಎನ್. ಪ್ರಸಾದ್ ರಾಜೀನಾಮೆಗೆ ಅಸಮಾಧಾನ ಕಾರಣವಲ್ಲ : ವೆಂಕಟ್ ವಳಲಂಬೆ

Advt_Headding_Middle
Advt_Headding_Middle

ಬಿಜೆಪಿಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ಜಿ.ಎಸ್.ಎನ್.ಪ್ರಸಾದ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಪಕ್ಷದೊಳಗಿನ ಯಾವುದೇ ಅಸಮಾಧಾನ ಕಾರಣವಲ್ಲ. ಇಲ್ಲಿ ಬಿಜೆಪಿಯಲ್ಲಿ ಅಂತಹ ಯವುದೇ ಅಸಮಾಧಾನವೂ ಇಲ್ಲ ಎಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.


ಸುಳ್ಯದಲ್ಲಿ ಅವರು ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭ ಪ್ರಸಾದ್‌ರವರ ರಾಜೀನಾಮೆ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದಾಗ, ಈ ಕುರಿತು ನಮಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಜಿಲ್ಲಾ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹೇಳಿದರು. ಕೆಲವು ತಿಂಗಳ ಹಿಂದೆಯೇ ಅವರು ಮಾತನಾಡುವಾಗ ತಂದೆಯ ಅಸೌಖ್ಯದ ಹಿನ್ನಲೆಯಲ್ಲಿ ಹುದ್ದೆಯ ಜವಾಬ್ದಾರಿಯಲ್ಲಿ ಮುನ್ನಡೆಯುವುದು ಕಷ್ಟ ಎಂದು ಹೇಳಿದ್ದರು. ಇತ್ತೀಚೆಗೆ ಅವರ ತಂದೆಯವರು ತೀರಿಕೊಂಡಿದ್ದಾರೆ. ರಾಜೀನಾಮೆ ವಿಚಾರ ತಿಳಿದ ಮೇಲೆ ಶಾಸಕರು ಮತ್ತು ನಾವು ಹೋಗಿ ಮಾತನಾಡಿದ್ದೇವೆ. ಆಗಲೂ ಸುಳ್ಯದಲ್ಲಿ ಪಕ್ಷದಿಂದ ಅಸಮಾಧಾನ ಉಂಟಾಗಿಲ್ಲ ಎಂದು ಹೇಳಿದ್ದಾರೆ. ಅವರು ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿರುವುದರಿಂದ ಮುಂದಿನ ತೀರ್ಮಾನಗಳನ್ನು ಜಿಲ್ಲಾ ಸಮಿತಿಯೇ ಕೈಗೊಳ್ಳಬೇಕಾಗುತ್ತದೆ ಎಂದು ವೆಂಕಟ್ ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮದ ಕುರಿತು ಪ್ರಶ್ನಿಸಿದಾಗ ಚುನಾವಣೆಯ ಮರುದಿನವೇ ಈ ಕುರಿತು ತೀರ್ಮಾನಿಸಲಿದ್ದೇವೆ. ಈಗ ಚುನಾವಣೆಯ ಒತ್ತಡದಲ್ಲಿರುವುದರಿಂದ ಆ ಕಡೆ ಗಮನ ಹರಿಸುವತಿಲ್ಲ. ಆದರೂ ಅಡ್ಡ ಮತದಾನ ಮಾಡಿದವರಲ್ಲಿ ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಮುಖಂಡರಾದ ಎ.ವಿ.ತೀರ್ಥರಾಮ, ಜಯರಾಮ ರೈ ಜಾಲ್ಸೂರು, ಮಹೇಶ್ ರೈ ಮೇನಾಲ, ವಿನಯ ಮುಳುಗಾಡು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.